ಸೋಮವಾರ, ಅಕ್ಟೋಬರ್ 21, 2019
24 °C

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ

Published:
Updated:

ಹಟ್ಟಿ ಚಿನ್ನದ ಗಣಿ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯವನ್ನು ಬೆರಸದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು ಮಾಡಬೇಕೆಂದು ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ನುಡಿದರು.ಮಂಗಳವಾರ ಇಲ್ಲಿಗೆ ಸಮೀಪದ ಸರ್ಜಾಪೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಚಿಕ್ಕಹೆಸರೂರು ಗ್ರಾಮದಲ್ಲಿ ಸರ್ಕಾರದ ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳಿಗೆ ಶಂಕುಸ್ಥಾಪನೆ  ನೆರವೇರಿಸಿ ಮಾತನಾಡಿದರು. ಬರಗಾಲದಿಂದ ರೈತ ವರ್ಗ ತತ್ತರಿಸಿದೆ. ಪರಿಹಾರಧನ ಶೀಘ್ರ ಬಿಡುಗಡೆ ಮಾಡಬೇಕು. ಮಾಸಾಶನ ಪುನಃ ಆರಂಭಿಸುವಂತೆ ಗ್ರಾಮದ ಮುಖಂಡ ಚಂದ್ರಕಾಂತ ನಾಡಗೌಡ ಶಾಸಕರಲ್ಲಿ ಮನವಿ ಮಾಡಿದರು.

 

ಗ್ರಾಮದಲ್ಲಿ 27.36 ಲಕ್ಷ ವೆಚ್ಚದಲ್ಲಿ ಚರಂಡಿ, ರಸ್ತೆ, 6.84 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭೂಸೇನಾ ನಿಗಮದ ಅಧಿಕಾರಿ ನೀಲಕಂಠಪ್ಪ ಹೇಳಿದರು. 

Post Comments (+)