`ಅಭಿವೃದ್ಧಿಯಲ್ಲಿ ಹುಮನಾಬಾದ್ ನಂ. 1'

7

`ಅಭಿವೃದ್ಧಿಯಲ್ಲಿ ಹುಮನಾಬಾದ್ ನಂ. 1'

Published:
Updated:

ಹುಮನಾಬಾದ್: ಅಭಿವೃದ್ಧಿ ವಿಷಯದಲ್ಲಿ ಜಿಲ್ಲೆಯ ಇತರ ವಿಧಾಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಹುಮನಾಬಾದ್ ನಂ. 1 ಸ್ಥಾನದಲ್ಲಿದೆ ಎಂದು ಎಂದು ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ವೀಕ್ಷಕ ಪ್ರಕಾಶ ರಾಠೋಡ ತಿಳಿಸಿದರು.   ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಂಬಂಧ ನಗರದ ಸರ್ಕಿಟ್ ಹೌಸ್ ಪ್ರಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಆಯೋಜಿಸಿದ್ದ ಪಕ್ಷದ ಕಾರ್ಯರ್ತರ ಸಭೆಯನ್ನು ಉದ್ದೇಶಿಸಿ, ಮಾತನಾಡಿದರು.ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವ ಶಾಸಕ ರಾಜಶೇಖರ ಪಾಟೀಲ ಅವರನ್ನು ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ, ತರುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಜವಾಬ್ದಾರಿ ಶಾಸಕ ಪಾಟೀಲ ವಹಿಸಿ ಕೊಳ್ಳಬೇಕು ಎಂದು ತಿಳಿಸಿದರು.ದೊಡ್ಡ ಪಕ್ಷಗಳಲ್ಲಿ ಸಣ್ಣಪುಟ್ಟ ದೋಷ ಆಗುವುದು ಸಹಜ. ಆದರೇ ಹಿಂದೆ ಆಗಿರುವ ತಪ್ಪು ಮುಂದೆ ಆಗದಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂ ಡರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.ಇಲ್ಲಿ ಎಲ್ಲವೂ ಸರಿಯಾಗಿದೆ. ಆದರೇ ಪಕ್ಷದ ನಿಯಮ ಪಾಲನೆ ಅನಿವಾರ್ಯ ಎಂಬ ಕಾರಣಕ್ಕಾಗಿ ಇಂದಿನ ಸಭೆಗೆ ಬಂದಿದ್ದಾಗಿ ತಿಳಿಸಿದ ಅವರು ಕಾರ್ಯ ಕರ್ತರಿಂದ ಸಂಗ್ರಹಿಸಲಾದ ಅಭಿಪ್ರಾಯ ವೀಕ್ಷಕ ತಂಡದ ಮೂವರು ಸೇರಿ ಕೆಪಿಸಿಸಿ ಅಧ್ಯಕ್ಷರಿಗೆ ತಲುಪಿಸುತ್ತೇವೆ ಎಂದು ತಿಳಿಸಿದರು.ವೀಕ್ಷಕ ಎಸ್.ಎ ಜಿದ್ದಿ ಮಾತನಾಡಿ, ರಾಜ್ಯದಲ್ಲಿನ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ ಆ ಸಂಬಂಧ ಕಾರ್ಯಕರ್ತರು ವೈಯಕ್ತಿಕ ಮತಬೇಧ ಬದಿಗೊತ್ತಿ ಶ್ರಮಿಸಬೇಕಿದೆ ಎಂದರು.ವೀಕ್ಷಕರಾಗಿ ಆಗಮಿಸಿದ್ದು ಇರುವ ತೊಡಕು ನಿವಾರಿಸುವುಕ್ಕೆ ಹೊರತು, ಎಲ್ಲವೂ ಸರಿ ಇರುವ ಕ್ಷೇತ್ರದಲ್ಲಿ ಕೆದಕಿ ನೋಡಿ, ಕೆಡಿಸುವುದಕ್ಕೆ ಖಂಡಿತಾ ಅಲ್ಲ ಎಂದು ಸ್ಪಷ್ಟಪಡಿಸಿದರು.ಪಕ್ಷದ ಜಿಲ್ಲಾ ಉಸ್ತುವಾರಿ ಅನ್ವರ ಮುಧೋಳ್ ಮಾತನಾಡಿದರು.ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ, ಪಕ್ಷ ಸಂಘಟನೆ ಇತ್ಯಾದಿ ವಿಷಯಗಳ ಕುರಿತು  ಪಕ್ಷದ ಕಾರ್ಯಕರ್ತರು ನಿರ್ಭಯವಾಗಿ ವೀಕ್ಷಕರನ್ನು ಪ್ರತ್ಯೇಕ ಭೇಟಿ ಮಾಡಿ, ದೂರು, ದುಮ್ಮಾನ ಹೇಳಲು ಅವಕಾಶವಿದೆ ಎಂದು ತಿಳಿಸಿದ ಅವರು, ನನ್ನ ಪರವಾಗಿ ವರದಿ ಸಲ್ಲಿಸಿ ಎಂದು ಖಂಡಿತಾ ಹೇಳಲಾರೆ. ಆದರೇ ಇರುವ ವಾಸ್ತವಾಂಶ ಪರಿಶೀಲಿಸಿ, ಸತ್ಯಾಂಶ ಪಕ್ಷದ ವರಿಷ್ಟರ ಗಮನಕ್ಕೆ ತರಲು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರಮಿಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಾಬಾ ಬುಖಾರಿ, ರೇವಣಪ್ಪ ಮಾನಕಾರೆ      ಮೊದಲಾದ ವರು ಶಾಸಕರ ಪರ ಬೆಂಬಲ ಸೂಚಿಸಿ, ಅಭಿಪ್ರಾಯ ಮಂಡಿಸಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಅರಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ ಮದರಗಾಂವ, ಸದಸ್ಯ ಲಕ್ಷ್ಮಣರಾವ ಬುಳ್ಳಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಗದೇವಿ ಕಾಡಗೊಂಡ, ಮಾಜಿ ಅಧ್ಯಕ್ಷ ಶಿವರಾಜ ಗಂಗಶೆಟ್ಟಿ, ಮಾಣಿಕರಾವ ವಾಡೇಕರ್, ಪುರಸಭೆ ಅಧ್ಯಕ್ಷೆ ಪದ್ಮಾವತಿ ಶಿವಾಜಿ ಮಚಕೂರಿ, ದತ್ತಕುಮಾರ ಚಿದ್ರಿ, ಕಂಟೆಪ್ಪ ದಾನಾ, ನಾರಾಯಣರೆಡ್ಡಿ ಬಿರಾದಾರ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಇಟಗಿ, ಡಾ.ಪ್ರಕಾಶ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಧರ್ಮರೆಡ್ಡಿ, ಅನೀಲಕುಮಾರ ಪಲ್ಲರಿ, ಸುರೇಶ ಘಾಂಗ್ರೆ, ವಾಹೇದ್ ಬೇಗ್, ಮಲ್ಲಿಕಾರ್ಜುನ ಮಾಳಶೆಟ್ಟಿ ಮೊದಲಾದವರು ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry