ಭಾನುವಾರ, ಅಕ್ಟೋಬರ್ 20, 2019
27 °C

ಅಭಿವೃದ್ಧಿ ಕಾಣದ ಕಾಮೇನಹಳ್ಳಿ!

Published:
Updated:

ಕೆ.ಆರ್.ನಗರ: ತಾಲ್ಲೂಕಿನ ಕಾಮೇನಹಳ್ಳಿ ಗ್ರಾಮ ಮೂಲ ಸೌಕರ್ಯಕ್ಕಾಗಿ ಕಾದಿದೆ. ತಾಲ್ಲೂಕು ಕೇಂದ್ರದಿಂದ 9ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಕುರುಬರು, ದಲಿತರು, ಲಿಂಗಾಯತರು, ಆಚಾರ್ಯರು, ನಾಮಧಾರಿ ಜನಾಂಗ ಸೇರಿದಂತೆ 1000ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ.ರಸ್ತೆ ಹದಗೆಟ್ಟಿವೆ. ರಸ್ತೆಗೆ ಡಾಂಬರ್ ಹಾಕಿದ ಉದಾಹರಣೆಗಳಿಲ್ಲ. ರಸ್ತೆಯ ಮೇಲಿನ ಕಲ್ಲು ಮೇಲೆದ್ದಿವೆ. ರಸ್ತೆಗೆ ಅಡ್ಡಲಾಗಿ ಹಾಕಿದ ಚರಂಡಿಯ ಚಪ್ಪಡಿಕಲ್ಲುಗಳು ಮುರಿದಿವೆ. ಕೆಲವು ಕಡೆ ಚರಂಡಿಗಳು ಕಟ್ಟಿಕೊಂಡು ಗಿಡಗಂಟಿಗಳು ಬೆಳೆದಿವೆ. ಬೀದಿ ದೀಪ ಕೆಟ್ಟುಹೋಗಿವೆ. ಕುಡಿಯುವ ನೀರು ಮೂರು ದಿನಗಳಿಗೊಮ್ಮೆ ಬಿಡಲಾಗುತ್ತದೆ. ಕುಡಿಯುವ ನೀರಿನ ಟ್ಯಾಂಕ್ ಶುಚಿಗೊಳಿಸದೇ ಇರುವುದರಿಂದ ಮತ್ತು ಮನೆಗಳಿಗೆ ನಲ್ಲಿ ಸಂಪರ್ಕ ಸರಿಯಾಗಿ ಒದಗಿಸದೇ ಇರುವುದರಿಂದ ಕುಡಿಯುವ ನೀರು ಕಲುಷಿತಗೊಂಡು ಈಚೆಗೆ ಗ್ರಾಮದಲ್ಲಿನ ಹಲ ವರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖ ಲಾಗಿ ಚಿಕಿತ್ಸೆ ಪಡೆದಿರುವುದು ಗಮನಿಸಬಹುದಾಗಿದೆ.ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗ್ರಾಮದ ಮನೆ ಗಳಿಗೆ ಸರಿಯಾಗಿ ನಲ್ಲಿ ಸಂಪರ್ಕ ಒದಗಿಸಬೇಕು. ಕಟ್ಟಿಕೊಂಡ ಚರಂಡಿಗಳು, ಬೀದಿ ದೀಪ, ಹದಗೆಟ್ಟ ರಸ್ತೆಗಳು ದುರಸ್ಥಿ ಗೊಳಿಸಬೇಕು ಎಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಂಡಿತ್ ನಾಟೀಕಾರ್

Post Comments (+)