ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

7

ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

Published:
Updated:

ಚಾಮರಾಜನಗರ: ಮಾದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲು  ಬಿಡುಗಡೆಯಾಗಿರುವ  14.50 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಜಿ.ಪಂ.ಸದಸ್ಯೆ ನಾಗಶ್ರೀಪ್ರತಾಪ್ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.ತಾಲೂಕಿನ ಮೇಲಾಜಿಪುರದಿಂದ ಬದನಗುಪ್ಪೆ ಮಾರ್ಗದ  ರಸ್ತೆ ಅಭಿವೃದ್ದಿಗೆ 3 ಲಕ್ಷ ರೂ, ಶಿವಪುರ- ಕಾಳನಹುಂಡಿಗೆ ಮಾರ್ಗದ ರಸ್ತೆ ಅಭಿವೃದ್ದಿ 2 ಲಕ್ಷ ರೂ, ಮಸಗಾಪುರ- ಕಾಡಹಳ್ಳಿ ಮಾರ್ಗದ ರಸ್ತೆ ಅಭಿವೃದ್ದಿಗೆ 2 ಲಕ್ಷ ರೂ, ನಂಜೇದೇವನಪುರ- ತಮ್ಮಡಹಳ್ಳಿ ಮಾರ್ಗದ ರಸ್ತೆ ಅಭಿವೃದ್ದಿಗೆ 1 ಲಕ್ಷ ರೂ, ಮಂಗಲ- ಮಂಗಲಹೊಸೂರು ಮಾರ್ಗ ಶಂಕರದೇವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ  ರಸ್ತೆ ಅಭಿವೃದ್ದಿಗೆ 3 ಲಕ್ಷ ರೂ ನೀಡಲಾಗಿದೆ ಎಂದು ತಿಳಿಸಿದರು.ಕಸ್ತೂರು ಮುಖ್ಯ ರಸ್ತೆಯಿಂದ ಆನಹಳ್ಳಿಯಿಂದ  ಪುಟ್ಟೇಗೌಡನಹುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ  2 ಲಕ್ಷ ರೂ, ಮರಿಯಾಲದಿಂದ ಶಿವಪುರಕ್ಕೆ ಸಂಪರ್ಕ ಕಲ್ಪಿಸುವ  ರಸ್ತೆ ಅಭಿವೃದ್ದಿಗೆ 1.50 ಲಕ್ಷ ರೂ.ಗಳನ್ನು ಬಿಡುಗಡೆಯಾಗಿದ್ದು ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದರು.ಈ ಕಾರ್ಯಕ್ರಮದಲ್ಲಿ ಮೇಲಾಜಿಪುರದ ಮಠದ  ಮಹಂತಾಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ಅಬ್ದುಲ್‌ಗಫಾರ್, ಮಾಜಿ ಅಧ್ಯಕ್ಷ ಬಸವಣ್ಣ, ಸದಸ್ಯರಾದ ಮಲ್ಲಿಗಮ್ಮ, ರಾಚಶೆಟ್ಟಿ, ಮುಖಂಡರಾದ ಸುಬ್ಬಪ್ಪ, ಶಾಂತಪ್ಪ, ನಾಗಣ್ಣ, ರಾಜೇಂದ್ರ, ಪುಟ್ಟಸ್ವಾಮಪ್ಪ, ಲಿಂಗರಾಜು ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry