ಅಭಿವೃದ್ಧಿ ಕಾರ್ಯಕ್ಕೆ ರಾಜಕೀಯ ಸಲ್ಲ

7

ಅಭಿವೃದ್ಧಿ ಕಾರ್ಯಕ್ಕೆ ರಾಜಕೀಯ ಸಲ್ಲ

Published:
Updated:
ಅಭಿವೃದ್ಧಿ ಕಾರ್ಯಕ್ಕೆ ರಾಜಕೀಯ ಸಲ್ಲ

ಬೆಳ್ಳಾರೆ: ಅಭಿವೃದ್ದಿ ಕೆಲಸಗಳ ಅನುಷ್ಠಾನದಲ್ಲಿ ರಾಜಕೀಯ ತರಬಾರದು. ಗ್ರಾಮೀಣಾಭಿವೃದ್ದಿಗೆ ಸರ್ಕಾರ ಹೆಚ್ಚು ಒತ್ತುಕೊಡುತ್ತಿದ್ದು ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಅಂಗಾರ ಹೇಳಿದರು.

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈಗ ಖಾಸಗಿ ಆಸ್ಪತ್ರೆಗಳಿಂತ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ಇದಕ್ಕೆ ಇಲ್ಲಿಯ ವೈದ್ಯರ ಉತ್ತಮ ಸೇವೆ ಕಾರಣ ಎಂದರು.ನಿಂತಿಕಲ್ಲು ಅರಿಯಡ್ಕ ರಸ್ತೆ ಅಭಿವೃದ್ದಿಗೆ 21.6 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈಗ ಅನೇಕ ರಸ್ತೆಗಳ   ಅಭಿವೃದ್ದಿಯಾಗಿದೆ. ಬೆಳ್ಳಾರೆ ರಸ್ತೆ ವಿಸ್ತರಣೆ ಮತ್ತು ಚರಂಡಿ ನಿರ್ಮಾಣಕ್ಕೆ ಇಲ್ಲಿಯ ವರ್ತಕರು ಸಹಕರಿಸಬೇಕು. ಇದರಿಂದ ಮಾತ್ರ ರಸ್ತೆ ಮತ್ತು ಉತ್ತಮ ಚರಂಡಿ ನಿರ್ಮಾಣ ಮಾಡಲು  ಸಾಧ್ಯ ಎಂದರು.ಜಿಲ್ಲಾ ಪಂಚಾಯತಿ ಸದಸ್ಯೆ ಆಶಾ ತಿಮ್ಮಪ್ಪ, ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀ ರಂಗಪ್ಪ, ಕೆಎಚ್‌ಆರ್‌ಬಿಸಿಯ ಜಗದೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸುಬ್ರಮಣ್ಯ, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಪ್ರಕಾಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಮುಳಿಯ ಕೇಶವ ಭಟ್, ತಾಲ್ಲೂಕು ಪಂಚಾಯತಿ ಸದಸ್ಯರಾದ ಅನಿಲ್ ರೈ, ಪುಷ್ಪಾವತಿ ಬಾಳಿಲ, ಬೆಳ್ಳಾರೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಾಧವ ಗೌಡ,ಸದಸ್ಯರಾದ ಆನಂದ ಬೆಳ್ಳಾರೆ, ನವೀನ್ ರೈ,ಕೆ.ಎಸ್. ಪೂಜಾರಿ, ಕಳಂಜ ಗ್ರಾಮ ಪಂಚಾಯತಿ ಅಧ್ಯಕ್ಷ ಸುಮಾ ವಿ,ಆಚಾರ್, ಪಿ.ಜಿ.ಎಸ್ ಎನ್ ಪ್ರಸಾದ್, ಸತ್ಯನಾರಾಯಣ ಕೋಡಿಬೈಲ್ ಕುಶಾಲಪ್ಪ ಪೆರುವಾಜೆ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry