ಅಭಿವೃದ್ಧಿ ಕಾರ್ಯಕ್ಕೆ ಸದಾ ಜನಮನ್ನಣೆ

7

ಅಭಿವೃದ್ಧಿ ಕಾರ್ಯಕ್ಕೆ ಸದಾ ಜನಮನ್ನಣೆ

Published:
Updated:

ಬಾಳೆಹೊನ್ನೂರು: ಕಳೆದ ಜಿ.ಪಂ, ತಾ.ಪಂ.ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನ ಮನ್ನಣೆ ನೀಡಿದ್ದಾರೆ ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಹೋಬಳಿ ಬಿಜೆಪಿ ಘಟಕ ಭಾನುವಾರ ಜಿ.ಪಂ, ತಾ.ಪಂ. ಸದಸ್ಯರು, ಅಭ್ಯರ್ಥಿಗಳು ಹಾಗೂ ಮತದಾರರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಚುನಾವಣೆಯಲ್ಲಿ ಬಿಜೆಪಿ ಜನರು ಬೆಂಬಲಿಸಿ, ಮನ್ನಣೆ ನೀಡಿದರೂ ಸಹ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅಪವಾದ ಹೊರಿಸುತ್ತಿರುವುದು ಸರಿಯಲ್ಲ. ವಿರೋಧ ಪಕ್ಷಗಳನ್ನು ಜನರೇ ತಿರಸ್ಕರಿಸುವ ಕಾಲ ಸನ್ನಿಹಿತವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ವಿರೋಧ ಪಕ್ಷದ ಸ್ಥಾನವೇ ಖಾಯಂ ಆಗಲಿದೆ ಎಂದರು.ಹೋಬಳಿ ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್.ರಾಮಸ್ವಾಮಿ, ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಆಶೀಸ್ ಕುಮಾರ್, ತಾಲ್ಲೂಕು ಅಧ್ಯಕ್ಷ ಸಂಪತ್‌ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎಸ್.ರವೀಂದ್ರ ಕುಕ್ಕುಡಿಗೆ, ನಿರ್ದೇಶಕ ಕೆ.ಕೆ.ವೆಂಕಟೇಶ್,  ಕಸಬಾ ಹೋಬಳಿ ಅಧ್ಯಕ ಮನು, ಖಾಂಡ್ಯ ಹೋಬಳಿ ಅಧ್ಯಕ್ಷ ಹುಯಿಗೆರೆ ವಾಸು, ಕ್ಷೇತ್ರ ಸಮಿತಿ ಅಧ್ಯಕ್ಷ ರಂಗನಾಥ್, ಕಾರ್ಯದರ್ಶಿ ರಾಘವೇಂದ್ರ, ಬಿಜೆಪಿ ಮುಖಂಡರಾದ ಟಿ.ಎಂ.ನಾಗೇಶ್ ಕಲ್ಮಕ್ಕಿ, ಉಮೇಶ್ ಕಲ್ಮಕ್ಕಿ, ವೈ.ಎಸ್.ಗಣಪಯ್ಯ, ಅನುಪಮಾ ಆಳ್ವಾ, ಪಾರ್ವತಮ್ಮ, ಖಾಲಿದ್ ಮಾಗುಂಡಿ, ಕೋಕಿಲಮ್ಮ ಇದ್ದರು.ಇಂಚರ, ಮೋಹನ್, ಕೆ.ಟಿ.ವೆಂಕಟೇಶ್, ಬಿ.ಅರುಣ್‌ಕುಮಾರ್, ಆರ್.ಡಿ.ಮಹೇಂದ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶೃಂಗೇರಿ ಕ್ಷೇತ್ರದಿಂದ ಜಿ.ಪಂ, ತಾ.ಪಂ.ಗೆ ಆಯ್ಕೆಯಾದ ಸದಸ್ಯರು, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಟ್ಟಿನಮನೆಯ ಸಹಿಪ್ರಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry