ಅಭಿವೃದ್ಧಿ ಕಾರ್ಯ ವಿಳಂಬ - ಸಚಿವ ಶೋಭಾ ಕರಂದ್ಲಾಜೆ

7

ಅಭಿವೃದ್ಧಿ ಕಾರ್ಯ ವಿಳಂಬ - ಸಚಿವ ಶೋಭಾ ಕರಂದ್ಲಾಜೆ

Published:
Updated:

ಕೆಂಗೇರಿ: `ಯಶವಂತಪುರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದರಿಂದ ಅಭಿವೃದ್ಧಿ ಕಾರ್ಯದಲ್ಲಿ ವಿಳಂಬವಾಗುತ್ತಿದೆ~ ಎಂದು ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.ರಾಮೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 4.40 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಸಮಾರಂಭದಲ್ಲಿ ರಾಮೋಹಳ್ಳಿಯ ದೇವಸ್ಥಾನ ಅಭಿವೃದ್ಧಿಗೆ ಐದು ಲಕ್ಷ ಚೆಕ್ ವಿತರಿಸಲಾಯಿತು. ಭೀಮನಕುಪ್ಪೆ, ವಿನಾಯಕನಗರ, ರಾಮೋಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.ನಗರ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸರ್ವಮಂಗಳ ಬಿ.ಕೃಷ್ಣಪ್ಪ, ಮುಖಂಡರಾದ ಎಚ್.ಎಲ್.ಕೃಷ್ಣಪ್ಪ, ಆರ್.ಪಿ.ಪ್ರಕಾಶ್, ವೇಣುಗೋಪಾಲ್, ಯಲ್ಲಪ್ಪ, ರತ್ನಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry