ಅಭಿವೃದ್ಧಿ ಕೇಂದ್ರವಾಗಲಿ: ಮುನಿಯಪ್ಪ

7

ಅಭಿವೃದ್ಧಿ ಕೇಂದ್ರವಾಗಲಿ: ಮುನಿಯಪ್ಪ

Published:
Updated:

ಶಿಡ್ಲಘಟ್ಟ: ಐದು ಶತಮಾನಗಳ ಇತಿಹಾಸವಿರುವ ವೇಣುಗೋಪಾಲಸ್ವಾಮಿ ದೇವಾಲಯವು ಊರಿನ ಪ್ರಮುಖ ತಾಣವಾಗಿದ್ದು, ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕವಾಗಿಯೂ ಜನರು ಸೇರುವ ವಾತಾವರಣವನ್ನು ಕಲ್ಪಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯ ನವೀಕರಣದ ಉದ್ಘಾಟನೆ ಮಾಡಿ ಮಾತನಾಡಿದರು.ದೇವಾಲಯದ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಸದಸ್ಯರು ಭಕ್ತರಿಂದ ಧನಸಹಾಯ ಪಡೆದು ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ಪಾಕಶಾಲೆ, ವ್ಯಾಯಾಮಶಾಲೆ, ಸಭಾಂಗಣ, ಗೋಪುರ, ಶೌಚಾಲಯ, ಉದ್ಯಾನವನ, ನೀರಿನ ಟ್ಯಾಂಕ್ ಇತ್ಯಾದಿ ನಿರ್ಮಿಸುತ್ತಿದ್ದಾರೆ. ಸಾಮಾಜಿಕ ಅಭಿವೃದ್ಧಿ ಕಾರ್ಯಗಳ ಕೇಂದ್ರವಾಗಿ ದೇವಾಲಯವು ಪರಿಣಮಿಸಲಿ ಎಂದು ಹೇಳಿದರು. ತಹಶೀಲ್ದಾರ್ ಬಿ.ಮಲ್ಲಿಕಾರ್ಜುನ, ರಾಜಸ್ವ ನಿರೀಕ್ಷಕ ಮಂಜುನಾಥ್, ಅರ್ಚಕ ವೈ.ಎನ್.ದಾಶರಥಿ, ಜಿ.ಪಂ. ಸದಸ್ಯರಾದ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಸತೀಶ್, ಜಿ.ಪಂ. ಮಾಜಿ ಸದಸ್ಯ ಎನ್.ಮುನಿಯಪ್ಪ, ತಾ.ಪಂ. ಸದಸ್ಯರಾದ ವೇಣುಗೋಪಾಲ್, ಡಿ.ಎಸ್.ಎನ್.ರಾಜು, ಮುನಿಕೃಷ್ಣಪ್ಪ, ಜಯಮ್ಮ, ಚಿಕ್ಕಮುನಿಯಪ್ಪ, ಯೂಸುಫ್, ಸಯ್ಯದ್, ಬಿ.ವಿ.ಮುನೇಗೌಡ, ಬಿ.ಪಿ.ರಾಘವೇಂದ್ರ, ಜೆ.ಎಂ.ಬಾಲಕೃಷ್ಣ,  ಇತರರುಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry