ಶುಕ್ರವಾರ, ಮೇ 7, 2021
20 °C

`ಅಭಿವೃದ್ಧಿ ಯೋಜನೆಗೆ 3ತಿಂಗಳ ಗಡುವು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿಶ್ವಬ್ಯಾಂಕ್ ಅನುದಾನದ ನಗರದ ಒಳಚರಂಡಿ ನಿರ್ಮಾಣ ಮತ್ತು ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಶಾಸಕ ಹಂಪನಗೌಡ ಬಾದರ್ಲಿ ನಗರ ನೀರು ಸರಬರಾಜು ಯೋಜನೆ ಮತ್ತು ಒಳಚರಂಡಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಸೋಮವಾರ ನಗರಸಭೆ ಸಭಾಂಗಣದಲ್ಲಿ ಕೆಯುಐಡಿಎಫ್‌ಸಿ ಮತ್ತು ಐಎಚ್‌ಎಸ್‌ಡಿಪಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, 2006ರಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಮಂಜೂರಿ ದೊರೆತಿದ್ದರೂ ಇಲ್ಲಿಯವರೆಗೆ ಅನುಷ್ಟಾನಗೊಳ್ಳದಿರುವುದಕ್ಕೆ ಮೂಲ ಕಾರಣವೇನೆಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ತುರ್ವಿಹಾಳ ಬಳಿ 259 ಎಕರೆ ಜಮೀನನ್ನು 2011ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಯಿತು. 28ಎಕರೆ ಜಮೀನನ್ನು ಸುಕಾಲಪೇಟೆ ಬಳಿ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆಗೆ ಖರೀದಿ ಮಾಡಲಾಗಿದೆ. ಎರಡು ಬಾರಿ ಟೆಂಡರ್ ಕರೆಯಲಾಗಿದ್ದು ಪ್ರಥಮ ಬಾರಿ ತಾಂತ್ರಿಕ ಅರ್ಹತೆ ಇಲ್ಲದಿರುವ ಗುತ್ತಿಗೆದಾರರು ಅರ್ಜಿ ಹಾಕಿದ್ದರಿಂದ ಟೆಂಡರ್‌ಗಳನ್ನು ತಿರಸ್ಕರಿಸಲಾಯಿತು.ಎರಡನೇ ಬಾರಿಯೂ ಸಹ ಟೆಂಡರ್‌ದಾರರು ಬಾರದ ಕಾರಣಕ್ಕೆ ತಿರಸ್ಕರಿಸಿದ್ದರಿಂದ ಕಾಮಗಾರಿ ಅನುಷ್ಟಾನದಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಶಾಸಕರ ಪ್ರಶ್ನೆಗೆ ಉತ್ತರಿಸಿದರು.ಸಿಂಧನೂರಿನಲ್ಲಿ 4 ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲು ಅಂದಾಜು ಪತ್ರಿಕೆಯಲ್ಲಿ ಅಳವಡಿಸಲಾಗಿದೆ ಎಂದು ಸಿಎನ್‌ಸಿ ಲ್ಯಾವಲಿ ಇನ್ಫಾಸ್ಟ್ರೆಕ್ಚರ್ ಕಂಪೆನಿಯ ಮುಖ್ಯಸ್ಥ ಸುಬ್ರಹ್ಮಣ್ಯಂ ವಿವರಿಸಿದರು.ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಕೃಷ್ಣಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ, ಐಎಚ್‌ಎಸ್‌ಡಿಪಿ ಯೋಜನೆಯ ಎಇಇ ರಂಗಾವಲಿ, ನಗರಸಭೆ ಪೌರಾಯುಕ್ತ ನಾಸೀರ್‌ಅಲಿ, ಎಇಇ ಗಂಗಾಧರ, ಜಾಫರ್‌ಅಲಿ ಜಾಗೀರದಾರ, ಶೇಖರಪ್ಪ ಗಿಣಿವಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.