ಅಭಿವೃದ್ಧಿ ವಂಚಿತ ಪಾತಬಾಗೇಪಲ್ಲಿ

7

ಅಭಿವೃದ್ಧಿ ವಂಚಿತ ಪಾತಬಾಗೇಪಲ್ಲಿ

Published:
Updated:

ಬಾಗೇಪಲ್ಲಿ: ತಾಲ್ಲೂಕು ಕೇಂದ್ರಕ್ಕೆ ಕೂಗಳತೆ ದೂರದಲ್ಲಿದ್ದರು ಪಾತಬಾಗೇಪಲ್ಲಿ ಗ್ರಾಮ ಅಕ್ಷರಶಃ ಕುಗ್ರಾಮವಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಆಗಿರುವ ಕಾಮಗಾರಿಗಳ ಕಳಪೆ ಗುಣಮಟ್ಟದಿಂದ ಕೂಡಿವೆ. ರಸ್ತೆಗಳ ತುಂಬೆಲ್ಲಾ ಕಲ್ಲುಗಳ ರಾಶಿ. ಕುಡಿಯಲು ನೀರಿಗೆ ಹಾಹಾಕಾರ. ಇವೆಲ್ಲ ಸೇರಿದರೆ ಪಾತಬಾಗೇಪಲ್ಲಿ ಆಗುತ್ತದೆ.ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ ಗೂಳೂರು ಮಾರ್ಗವಾಗಿ 2 ಕಿ.ಮೀ ದೂರ ಸಂಚರಿಸಿದರೆ ಈ ಗ್ರಾಮ ಸಿಗುತ್ತದೆ. ಗ್ರಾಮಕ್ಕೆ ಹಾದು ಹೋಗುವ ರಸ್ತೆ ಜಲ್ಲಿಮಯವಾಗಿದ್ದು, ಸಂಚಾರ ದುಸ್ಸಾಹವಾಗಿದೆ. ಗ್ರಾಮದಲ್ಲಿ ಕೆಲವು ರಸ್ತೆಗಳಿದ್ದರೂ ದುರಸ್ತಿ ಕಾಣದೇ ಅವು ರಸ್ತೆಗಳೆಂಬುದಕ್ಕೆ ಅನುಮಾನ ಮೂಡಲಿದೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿ ಇದ್ದರೂ ನೀರು ಸಂಗ್ರಹಕ್ಕಾಗಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸದ ಕಾರಣ ಅದು ನೀರಿನ ಸಮಸ್ಯೆ ಕಾಡುತ್ತಿದೆ. ಟ್ಯಾಂಕ್ ಕಾಮಗಾರಿ ನಡೆಯುತ್ತಿದ್ದರೂ  ಅದು ಆಮೆಗತಿಯಲ್ಲಿ ಸಾಗುತ್ತಿದ್ದು ಅದು ಪೂರ್ಣಗೊಳ್ಳುವ ನಿರೀಕ್ಷೆ ಗ್ರಾಮಸ್ಥರಿಗಿಲ್ಲ.|ಚರಂಡಿ ನೀರೆಲ್ಲವು ರಸ್ತೆಯ ಮೇಲೆ ಹರಿಯುತ್ತದೆ. ದುರ್ನಾತ ಬೀರುವುದರ ಜತೆಗೆ ಚರಂಡಿ ನೀರು ಅಲ್ಲಲ್ಲಿ ನಿಲ್ಲುವ ಕಾರಣ ಸೊಳ್ಳೆಗಳ ತಾಣವಾಗಿ ಗ್ರಾಮ ರೂಪಾಂತರಗೊಂಡಿದೆ.‘ತಾಲ್ಲೂಕು ಕೇಂದ್ರಕ್ಕೆ ಸಮೀಪದಲ್ಲಿರುವ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗ್ರಾಮದ ರಸ್ತೆಗಳು ಹದಗಟ್ಟಿವೆ. ಮಳೆ ಬಂದರೆ ಸಂಚರಿಸಲು ಕಷ್ಟವಾಗುತ್ತದೆ. ಚರಂಡಿ ಹಾಳಾಗಿದೆ.ಗ್ರಾಮ ಪಂಚಾಯಿತಿಯಿಂದ ಸಿಗುವ ಕಾರ್ಯಯೋಜನೆಗಳು ಸರಿಯಾಗಿ ಲಭಿಸಬೇಕಾಗಿದೆ. ಕನಿಷ್ಠ ತಿಂಗಳಿಗೂಮ್ಮೆಯಾದರೂ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಚುನಾಯಿತ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕು’ ಎಂದು ಗ್ರಾಮಸ್ಥ ಅಂಗಡಿ ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry