ಬುಧವಾರ, ಆಗಸ್ಟ್ 21, 2019
25 °C

`ಅಭಿವೃದ್ಧಿ ಹೆಸರಲ್ಲಿ ಸಂಪನ್ಮೂಲಕ್ಕೆ ಕುತ್ತು'

Published:
Updated:

ಚಿಂಚೋಳಿ: ತಾಲ್ಲೂಕಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲ ಕೊಳ್ಳೆ ಹೊಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಧುರೀಣರಾದ ಬಸವರಾಜ ಸಜ್ಜನಶೆಟ್ಟಿ ಹಾಗೂ ಜಹೀರೋದ್ದಿನ್ ಪಟೇಲ್ ಆರೋಪಿಸಿದ್ದಾರೆ.ತಾಲ್ಲೂಕಿನ ಸೋಮಲಿಂಗದಳ್ಳಿ ಬಳಿ ವನ್ಯಜೀವಿ ಧಾಮದ ಸೆರಗಿನಲ್ಲಿಯೇ ಸ್ಪೋಟಕ ಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಅಲ್ಲೂ ಕ್ರಷರ್ ಘಟಕವಿದೆ ಎಂದು ಅವರು    ತಿಳಿಸಿದ್ದಾರೆ.ಚಿಂಚೋಳಿ ಸೇಡಂ ರಸ್ತೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಪಡೆದ ಹೈದರಾಬಾದ್ ಮೂಲದ ಕಂಪೆನಿ ಹೊಡೇಬೀರನಹಳ್ಳಿ ಬಳಿ ಕ್ರಷರ್ ಘಟಕ ಸ್ಥಾಪಿಸಿ ಅನಧಿಕೃತವಾಗಿ ಜಲ್ಲಿಕಲ್ಲನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದೆ. ಸುಲೇಪೇಟ ಮಹಾಗಾಂವ್ ಕ್ರಾಸ್ ರಸ್ತೆ ಅಭಿವೃದ್ಧಿ ಹೆಸರಲ್ಲಿ  ಸ್ಥಾಪಿಸಿದ ಸೋಮಲಿಂಗದಳ್ಳಿ ಬಳಿಯ ಕ್ರಷರ್ ಘಟಕದಿಂದ ಸಿಮೆಂಟ್ ಕಂಪೆನಿಗಳಿಗೆ ಜಲ್ಲಿಕಲ್ಲು ಪೂರೈಕೆ ದಂಧೆ ಅವ್ಯಾಹತವಾಗಿ ಸಾಗಿದೆ ಎಂದು ದೂರಿದ್ದಾರೆ.ಚೆಟ್ಟಿನಾಡು ಸಿಮೆಂಟ್ ಕಂಪೆನಿ ವ್ಯಾಪಕ ಅವ್ಯವಹಾರದಲ್ಲಿ ತೊಡಗಿದ್ದು ಕಂಪೆನಿಯ ಸಾಮಾಜಿಕ ಭದ್ರತಾ ಚಟುವಟಿಕೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವುದರಿಂದ ಜಿಲ್ಲಾಧಿಕಾರಿಗಳು ತಾಲ್ಲೂಕಿಗೆ ಭೇಟಿ ನೀಡಿ ಕಂಪೆನಿಯ ಸಿಎಸ್‌ಆರ್ ಕಾರ್ಯಕ್ರಮ ಖುದ್ದು ಪರಿಶೀಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Post Comments (+)