ಶನಿವಾರ, ಮೇ 8, 2021
25 °C
ಭಾರತ ಕಮ್ಯುನಿಸ್ಟ್‌ (ಎಂ.ಎಲ್‌) ಪಕ್ಷದಿಂದ ಒಂದು ನೋಟು ಒಂದು ಓಟು

ಅಭ್ಯರ್ಥಿಗಳಿಂದ ಕ್ಷೇತ್ರ ಕಡೆಗಣನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಹಿಂದಿನ ಹದಿನೈದು ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದಿಂದ ಆಯ್ಕೆಯಾಗಿರುವ ಲೋಕ­ಸಭಾ ಪ್ರತಿನಿಧಿಗಳು ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಭಾರತ ಕಮ್ಯುನಿಸ್ಟ್‌ (ಎಂ.ಎಲ್‌) ಪಕ್ಷದ ಜಿಲ್ಲಾ ಮಂಡಳಿ ಸದಸ್ಯ ಉಮೇಶ್‌ ಆರೋಪಿಸಿದರು.ಪಟ್ಟಣದಲ್ಲಿ ಶುಕ್ರವಾರ ಪಕ್ಷದ ವತಿಯಿಂದ ನಡೆಸಲಾದ ಒಂದು ನೋಟು– ಒಂದು ಓಟು ಕಾರ್ಯ­ಕ್ರಮ್ಕಕೆ ಚಾಲನೆ ನೀಡಿ ಮಾತ­ನಾಡಿದರು. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಶ್ರೀಮಂತ ವ್ಯಕ್ತಿಗಳ ಪರ­ವಾಗಿ, ಕಾರ್ಪೋರೇಟರ ಪರವಾಗಿ ಆಡಳಿತ ನಡೆಸುತ್ತಿದ್ದು, ಜನ ಸಾಮಾ­ನ್ಯರು ಮತ್ತು ಬಡ ವರ್ಗವನ್ನು ಕಡೆಗಣಿಸಿದ್ದಾರೆ. ಕಳೆದ ಅವಧಿಯಲ್ಲಿ ಸಂಸದ­ರಾಗಿ ಆಯ್ಕೆಯಾದ ಕಾಂಗ್ರೆ­ಸ್‌ನ ಜಯಪ್ರಕಾಶ್‌ ಹೆಗ್ಡೆ ಅವರಿಂದ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ಶೂನ್ಯ­ವಾಗಿದೆ ಎಂದು ಆರೋಪಿಸಿ­ದರು. ಬಿಜೆಪಿ ಪಕ್ಷವು ಸ್ಥಳೀಯರಲ್ಲದ ನಾಯಕರನ್ನು ಚುನಾವಣಾ ಕಣಕ್ಕೆ ಇಳಿಸಿದ್ದು, ಈ ಪಕ್ಷಗಳಿಗೆ ಸ್ಥಳೀಯ ಸಮಸ್ಯೆಗಳಿಗಿಂತ ಗೆಲುವುಗಳೇ ಮುಖ್ಯ­ವಾಗಿದೆ ಎಂದು ಆರೋಪಿಸಿದರು.ಕ್ಷೇತ್ರದಿಂದ ನಿರಂತರವಾಗಿ ಕಾರ್ಮಿ­ಕರ ಸಮಸ್ಯೆ ನಿವಾರಣೆ, ಬಡವರ ಏಳಿಗೆಗಾಗಿ ಹೋರಾಟ ಮಾಡು­ತ್ತಿರುವ ಸಿಪಿಐ ಎಂ.ಎಲ್‌. ಪಕ್ಷವು ಈ ಬಾರಿ ಲೋಕಸಭಾ ಚುನಾವಣೆಗೆ ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಜೆ.­ಜಗನ್ನಾಥ್‌ ಅವರನ್ನು ಕಣಕ್ಕೆ ಇಳಿಸ­ಲಾಗಿದ್ದು, ‘ಓಟು ಬದಲಾ­ವಣೆಗಾಗಿ, ಓಟು ಅಧಿಕಾರಕ್ಕಾಗಿ’ ಎಂಬ ಘೋಷ­ಣೆ­­ಗಳೊಂದಿಗೆ ಅಂಗಡಿ ಮುಂಗ­ಟ್ಟು­ಗಳಿಗೆ ತೆರಳಿ ಚುನಾ­ವಣೆಯ ಅಂಗ­ವಾಗಿ ಒಂದು ನೋಟು ಕೊಡುವುದರ ಜೊತೆಗೆ ಒಂದು ಓಟು ಕೊಡುವಂತೆ ಮತಯಾಚನೆ ನಡೆಸಿ ಹಣ ಸಂಗ್ರಹ ಮಾಡಿದರು. ಸಿಪಿಐ ಎಂ.ಎಲ್. ಪಕ್ಷದ ಅಭ್ಯರ್ಥಿ ಸಿ.ಜೆ.ಜಗನ್ನಾಥ್‌, ಪದಾಧಿ­ಕಾರಿ­ಗಳಾದ ಗೋಪಾಲ್‌, ಕುಮಾರ್‌, ಬಸವ­ರಾಜು, ಕೆಂಚಯ್ಯ, ವಿಜಯ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.