ಬುಧವಾರ, ನವೆಂಬರ್ 13, 2019
22 °C

ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ

Published:
Updated:

ಬೆಳಗಾವಿ: ನಗರದಲ್ಲಿ ಬಿಸಿಲಿಗಿಂತ ಚುನಾವಣಾ ಕಾವು ಹೆಚ್ಚುತ್ತಿದೆ. ಬಹುತೇಕ ಅಭ್ಯರ್ಥಿಗಳು ಸುಡು ಬಿಸಿಲಿನಲ್ಲಿಯೇ ತಮ್ಮ ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ನಿತ್ಯ ಹತ್ತಾರು ಕಡೆಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚಿ ಸುತ್ತಿದ್ದಾರೆ.ಹೆಬ್ಬಾಳಕರರಿಂದ ಪ್ರಚಾರ: `ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಕಳೆದ 50 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದವರು ಯಾವುದೇ ಕೆಲಸ       ಮಾಡಿಲ್ಲ' ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದರು.

ಗ್ರಾಮೀಣ ಕ್ಷೇತ್ರದ ಕಿಣೆಯೆ, ಬಾಹದಾರ ವಾಡಿ, ಸಂತಿಬಸ್ತವಾಡ ಸೇರಿದಂತೆ ವಿವಿಧ ಗ್ರಾಮ ಗಳಲ್ಲಿ ಸಂಚರಿಸಿ ಮತಯಾಚಿಸಿದರು.ಜಿಲ್ಲಾ ಪಂಚಾಯತಿ ಸದಸ್ಯ ರಮೇಶ ಗೋರಲ ಮಾತನಾಡಿ, ಕಳೆದ 50 ವರ್ಷಗಳಿಂದ ಭಾಷಾ ರಾಜಕಾರಣ ಮಾಡಿರುವ ಎಂಇಎಸ್ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ.  ಕ್ಷೇತ್ರದ ಸುಧಾರಣೆಗಾಗಿ ಗ್ರಾಮೀಣ ಕ್ಷೇತ್ರದ ಮರಾಠಿ ಭಾಷಿಕರು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸ ಬೇಕು ಎಂದು ಮನವಿ ಮಾಡಿದರು.ಯುವರಾಜ ಕದಮ್, ಪಿ.ಸಿ.ಕೋಲಕಾರ, ಪಂಚನಗೌಡ ದಾಮನಗೌಡ ಮತ್ತಿತರರು ಉಪಸ್ಥಿತರಿದ್ದರು.

ಸಂಜಯ ಪಾಟೀಲ ಮತಯಾಚನೆ: ವಿಧಾನ ಸಭೆಗೆ ತಮ್ಮನ್ನು ಮರು ಆಯ್ಕೆ ಮಾಡಬೇಕು ಎಂದು ಕೋರಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಸಂಜಯ ಪಾಟೀಲ ಅವರು ಗ್ರಾಮೀಣ ಭಾಗದಲ್ಲಿ ಮಂಗಳವಾರ ಪಾದಯಾತ್ರೆ ಮೂಲಕ ಮತಯಾಚಿಸಿದರು. ತಾಲ್ಲೂಕಿನ ತುರಮುರಿ, ಬಾಚಿ                 ಮತ್ತು ಕುದ್ರೆಮನಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ತಮ್ಮನ್ನು ಆಶೀರ್ವದಿಸುವಂತೆ ಕೋರಿದರು.ಬಿಜೆಪಿ ಬೆಳಗಾವಿ ಗ್ರಾಮೀಣ ವಿಭಾಗದ ಅಧ್ಯಕ್ಷ ವಿನಯ ಕದಮ್, ವೈಜು ಗೋಜಗೇಕರ, ಮಾರುತಿ ಖಾಂಡೇಕರ, ಲಕ್ಷ್ಮಣ        ಬಾಂಧುರ್ಗೆ, ರಾಜು ದೇವನ, ಪಿರಾಜಿ    ದುಪ್ಪಟ್ಟ, ನೀಲಕಂಠ ಸಾಖರೆ, ಕುದ್ರೆಮನಿ   ಗ್ರಾಮ ಪಂಚಾಯತಿ ಅಧ್ಯಕ್ಷ ಸಂಜಯ ಪಾಟೀಲ, ಸಂದೀಪ ಪಾಟೀಲ, ಓಮಾಜಿ ಪಾಟೀಲ, ಮಧುಕರ ದೇವನ, ಪನ್ನಾಳಕರ, ನೀಲಕಂಠ ಸಾಖರೆ ಮತ್ತಿತರರು ಉಪಸ್ಥಿತರಿದ್ದರು.ಕಿರಣ ಜಾಧವ್‌ರಿಂದ ಬಿರುಸಿನ ಪ್ರಚಾರ: ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ ಜಾಧವ್ ಅವರು ಪಾಟಿಲ ಗಲ್ಲಿ, ಅನಂತಶಯನ ಗಲ್ಲಿ, ರಾಮಲಿಂಗಖಿಂಡ ಗಲ್ಲಿ ಮತ್ತು ಅನಸೂರಕರ್ ಗಲ್ಲಿಯಲ್ಲಿ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು.ಸಂಸದ ಸುರೇಶ ಅಂಗಡಿ ಅವರು ಮಾಳಮಾರುತಿ ಹಾಗೂ ಮಹಾಂತೇಶ ನಗರದಲ್ಲಿ ಪ್ರಚಾರ ನಡೆಸಿ ಕಿರಣ ಜಾಧವ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.ಎಂ.ಬಿ.ಜಿರಲಿ, ಎಲ್.ವಿ.ಪಾಟಿಲ, ಅನೀಲ ಬೆನಕೆ, ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ, ಕೆ.ಡಿ.ದೇಶಪಾಂಡೆ, ಸಂಜೀವ ಹನಮಸಾಗರ ಪಾಲ್ಗೊಂಡಿದ್ದರು.ಅಭಯ ಪಾಟೀಲರಿಂದ ಪ್ರಚಾರ: `ಶಹಾ ಪುರದ ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು' ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಅಭಯ ಪಾಟೀಲ ಹೇಳಿದರು.ನಗರದ ಶಹಾಪುರದ ವಿವಿಧ ಗಲ್ಲಿಗಳಲ್ಲಿ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಈ ಭಾಗದಲ್ಲಿರುವ ವ್ಯಾಪಾರಿಗಳಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲು ರೂಪರೇಷೆ ಸಿದ್ಧಪಡಿ ಸಲಾಗಿದೆ ಎಂದರು.ಶಹಾಪುರದ ನವಿ ಗಲ್ಲಿ, ಗಣೇಶಪುರ, ಪವಾರ ಗಲ್ಲಿ, ಬಸವನ ಗಲ್ಲಿ, ಸರಾಫ್ ಗಲ್ಲಿ, ಖಡೇ ಬಜಾರ, ಬಿಚ್ಚು ಗಲ್ಲಿ, ಆಚಾರ್ಯ ಗಲ್ಲಿ, ನಾರ್ವೇಕರ ಗಲ್ಲಿ, ಹೊಸೂರ, ಕಚೇರಿ ಗಲ್ಲಿ, ಕೋರೆ ಗಲ್ಲಿ, ದಾನೆ ಗಲ್ಲಿ, ಅಳ್ವಾನ ಗಲ್ಲಿ ಮತ್ತಿತರ ಕಡೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿ ಸಿದರು.

ರವಿ ಧೋತ್ರೆ, ದೀಪಕ ಜಮಖಂಡಿ, ರಾಜು ಪಾಟೀಲ, ಸುಭಾಷ ಆನಂದಾಚೆ, ಕಿಶನ್ ಭಾಂಡಗೆ, ಅಶ್ವಿನಿ ಲೇಂಗಡೆ, ಸವಿತಾ ಹೆಬ್ಬಾಳ,

ಸಾರಿಕಾ ಪಾಟೀಲ, ಗೀತಾ ಸುತಾರ, ಡಾ. ಪವಾರ ಮತ್ತಿತರರು ಉಪಸ್ಥಿತರಿದ್ದರು.ಬೆಳಗಾವಿಗೆ ಜೋಶಿ ಇಂದು

ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರು ಇದೇ 24 ರಂದು ಬೆಳಗಾವಿಗೆ ಆಗಮಿಸಿ ಚುನಾವಣಾ ಪ್ರಚಾರ ಸಭೆ ನಡೆಸುವರು.ಅಂದು ಮಧ್ಯಾಹ್ನ 12ಕ್ಕೆ ಉದ್ಯಮಬಾಗ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ          ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಅಭಯ ಪಾಟೀಲ ಅವರ ಚುನಾವಣಾ ಪ್ರಚಾರಾರ್ಥ ನಡೆಯುವ ಸಭೆಯಲ್ಲಿ ಭಾಗವಹಿಸುವರು.

ಪ್ರತಿಕ್ರಿಯಿಸಿ (+)