ಮಂಗಳವಾರ, ನವೆಂಬರ್ 19, 2019
25 °C

ಅಭ್ಯರ್ಥಿಗಳ ಪರ ಪ್ರಚಾರ ಜೋರು; ರಂಗೇರಿದ ಕಣ

Published:
Updated:

ನರಗುಂದ: ತಾಲ್ಲೂಕಿನ  ಶಿರೋಳ ಮತ್ತು ಕಪ್ಪಲಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಅಭ್ಯರ್ಥಿ ಪ್ರಕಾಶ ಕರಿಯವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ  ಪ್ರಕಾಶ ಕರಿ `ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು  20 ತಿಂಗಳುಗಳ ಆಡಳಿತದಲ್ಲಿ ಜನಪರ, ರೈತಪರ, ಎಲ್ಲ ವರ್ಗದವರಿಗೂ ಆದ್ಯತೆ  ನೀಡಿದ್ದಾರೆ. ಈ ಸಲ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ರೀತಿಯ ಸಂಪೂರ್ಣ ಸಾಲ ಮನ್ನಾ ಮಾಡಲಿದ್ದಾರೆ. ಆದ್ದರಿಂದ  ರೈತರ ಏಳ್ಗೆಗಾಗಿ ಎಲ್ಲ ಮತದಾರರು ಜಾತ್ಯತೀತ ಜನತಾದಳವನ್ನು ಬೆಂಬಲಿಸಬೇಕೆಂದು ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ನರಗುಂದ ವಿಧಾನಸಭಾ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ಹನಮಂತಗೌಡ ಕಲ್ಮನಿ, ವಿದ್ಯಾರ್ಥಿ ಘಟಕದ  ಜಿಲ್ಲಾಧ್ಯಕ್ಷ  ಪ್ರಭುರಾಜಗೌಡ ವೀ ಪಾಟೀಲ, ಸಂಘಟನಾ ಕಾರ್ಯದರ್ಶಿ ಮಲ್ಲು ಗೊಲ್ಲರ, ಜೆಡಿಎಸ್ ಯುವ ಮುಖಂಡ  ಶಿವರಾಜಗೌಡ ಹಿರೇಮನಿಪಾಟೀಲ, ಡಾ.ನಾಗರಾಜ ಕಾಜಗಾರ, ದಾದಾಪೀರ ಶಿರೂರ, ರಫೀಕ್ ನೀಲಗುಂದ, ಸಹದೇವ ಅಂಬಿಗೇರ್, ವಸಂತ ಎನ್ ಕರಿ, ಹನುಮಂತ ಕಂಬಳಿ, ಕಪ್ಪಲಿ ಗ್ರಾಮದ ಎಸ್ ಬಿ ಭೂಸನಗೌಡ್ರ, ಎಫ್. ಎಸ್. ಕೊಣ್ಣೂರ, ರಾಚಯ್ಯ ಹಿರೇಮಠ, ಟಿ. ಎಲ್. ಕಲಾರಿ ಸೇರಿದಂತೆ ಮೊದಲಾದವರಿದ್ದರು.ಸಿ. ಸಿ. ಪಾಟೀಲರ ಪರ ಪ್ರಚಾರ

ನರಗುಂದ: ಬಿಜೆಪಿ ಅಭ್ಯರ್ಥಿ ಸಿ. ಸಿ. ಪಾಟೀಲ  ಪರ ಬಿಜೆಪಿ  ಮಹಿಳಾ ಮೋರ್ಚಾದ ಅಧ್ಯಕ್ಷೆ ಸುಕನ್ಯಾ  ಸಾಲಿ  ನೇತೃತ್ವದಲ್ಲಿ  ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪಾದಯಾತ್ರೆ ಮೂಲಕ  ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡು  ಮತ ಯಾಚಿಸಿದರು. ಪ್ರಚಾರ ಕಾರ್ಯದಲ್ಲಿ  ಚಂದ್ರಕಲಾ ಕೋಟಿ,  ಬಸಮ್ಮ ಪಿಡ್ನಾಯ್ಕರ, ಶಾಂತವ್ವ ಕೋರಿ, ಮಹಬೂಬಿ ಮಟಗೇರ, ಮಲ್ಲಮ್ಮ ಗುಂಜಾಳ,  ಯಲ್ಲಮ್ಮ ಮಟಗೇರ,  ರೇಣುಕಾ ಖಾನಪೇಠ,  ಶಿವಲೀಲಾ ಕೊಳ್ಳಿಯವರ,  ಶಾಂತವ್ವ ಮೆಣಸಿನಕಾಯಿ, ಪ್ರೇಮಾ ಅಣ್ಣಿಗೇರಿ, ಮೀನಾಕ್ಷಿ ನವಲಗುಂದ,  ರೇಣುಕಾ ತಡಹಾಳ,  ವಿಜಯಲಕ್ಷ್ಮೀ ಹುಯಿಲಗೋಳ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.ಜೆಡಿಎಸ್ ಪರ ಮತಯಾಚನೆ

ಲಕ್ಷ್ಮೇಶ್ವರ: ಜೆಡಿಎಸ್ ಅಭ್ಯರ್ಥಿ ಗುರಣ್ಣ ವಡ್ಡರ ಬುಧವಾರ ಸಮೀಪದ ರಾಮಗಿರಿ ಗ್ರಾಮದಲ್ಲಿ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತಮ ಆಡಳಿತಗಾರರಾಗಿದ್ದು ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ತಿಪ್ಪಣ್ಣ ಕೊಂಚಿಗೇರಿ, ಶಿವಯೋಗಿ ಹಮ್ಮಗಿ, ಚಾಂದ್‌ಸಾಬ್ ಮುಳಗುಂದ, ನಜೀರ್ ಡಂಬಳ, ಬಸವಣ್ಣೆಪ್ಪ ಹಂಜಿ, ಅಕ್ಬರ್‌ಸಾಬ್ ಯಾದಗಿರಿ, ಶಂಕ್ರಣ್ಣ ಹೊನ್ನಳ್ಳಿ, ಮಹಾದೇವಪ್ಪ ಹೊಂಬಳ, ಬೈರಕ್‌ದಾರ ಸೇರಿದಂತೆ ಮತ್ತಿತರರು ಹಾಜರಿದ್ದರು.ಬಿಎಸ್‌ಆರ್-ಕಾಂಗ್ರೆಸ್ ರೋಡ್ ಶೋ

ಲಕ್ಷ್ಮೇಶ್ವರ: ಬಿಎಸ್‌ಆರ್-ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ, ಮುಖಂಡ ಸಣ್ಣವೀರಪ್ಪ ಹಳ್ಳೆಪ್ಪನವರ, ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ, ಮಹಾಂತೇಶ ಹಳ್ಳೆಪ್ಪನವರ ಇವರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಬಿಎಸ್‌ಆರ್-ಕಾಂಗ್ರೆಸ್ ಕಾರ್ಯಕರ್ತರು ಲಕ್ಷ್ಮೇಶ್ವರದಲ್ಲಿ ರೋಡ್ ಶೋ ನಡೆಸಿದರು. ಸ್ಥಳೀಯ ಪಂಪ ವರ್ತುಲದಿಂದ ಆರಂಭವಾದ ರೋಡ್ ಶೋ ಬಸ್ತಿಬಣ, ವಿದ್ಯಾರಣ್ಯ ವರ್ತುಲ, ಬಜಾರ, ಸೋಮೇಶ್ವರ ಪಾದಗಟ್ಟಿ, ಪುರಸಭೆ, ಶಿಗ್ಲಿ ಕ್ರಾಸ್, ಹೊಸ ಬಸ್ ನಿಲ್ದಾಣದಲ್ಲಿ ಸಂಚರಿಸಿತು.ಮತದಾನ ಜಾಗೃತಿಗೆ ಬೀದಿ ನಾಟಕ

ಲಕ್ಷ್ಮೇಶ್ವರ: ಭಾರತ ಚುನಾವಣಾ ಆಯೋಗದ ಆದೇಶ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಆಶ್ರಯದಲ್ಲಿ ಬುಧವಾರ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ಕೊತಬಾಳದ ಶಂಕ್ರಪ್ಪ ಸಂಕಣ್ಣವರ ಅವರ ಅರುಣೋದಯ ಕಲಾ ತಂಡದ 12 ಸದಸ್ಯರು ಮತದಾನದ ಕುರಿತು ಉತ್ತಮವಾಗಿ ನಾಟಕ ಪ್ರದರ್ಶನ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಪುರಸಭೆ ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಸಮನ್ವಯಾಧಿಕಾರಿ ಬಿ.ಎನ್. ಮಸರಿಕಲ್ಲ, ಬಿ.ಮಂಜುನಾಥ, ಎನ್.ಎಂ. ಹಾದಿಮನಿ ಹಾಜರಿದ್ದರು.ಸರ್ಕಾರದ ಸಾಧನೆಗಳೇ ಶ್ರೀರಕ್ಷೆ: ಎಂಎಸ್‌ಡಿ

ಲಕ್ಷ್ಮೇಶ್ವರ: ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಜಾರಿಗೆ ತಂದಿರುವ ಯೋಜನೆಗಳು ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ ಆಗಿವೆ ಎಂದು ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ತಿಳಿಸಿದರು. ಸಮೀಪದ ಮಂಜಲಾಪುರದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಶಾಸಕ ರಾಮಣ್ಣ ಲಮಾಣಿ ಅವರ ಪರವಾಗಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು.  ಬಿಜೆಪಿ ಹಿರಿಯ ಮುಖಂಡ ಡಾ.ವೈ.ಎಫ್. ಹಂಜಿ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯದ ಎಲ್ಲ ಲಂಬಾಣಿ ತಾಂಡಾಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಯ 28 ಲಂಬಾಣಿ ತಾಂಡಾಗಳನ್ನು ಶಾಸಕ ರಾಮಣ್ಣ ಲಮಾಣಿ ಅಭಿವೃದ್ಧಿ ಮಾಡಿದ್ದಾರೆ. ಕಾರಣ ಈ ಬಾರಿ ಮತ್ತೆ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಧುರೀಣರಾದ ಬಸಣ್ಣ ಹತ್ತಿಕಾಳ, ನೀಲಪ್ಪ ಕರ್ಜೆಕಣ್ಣವರ, ನಿಂಗಪ್ಪ ಬನ್ನಿ, ಚೆಂಬಣ್ಣ ಬಾಳಿಕಾಯಿ, ನಾಗರಾಜ ಚಿಂಚಲಿ, ಡಿ.ಬಿ. ಬಳಿಗಾರ, ಸಿದ್ದನಗೌಡ ಬಳ್ಳೊಳ್ಳಿ, ಪುರಸಭೆ ಸದಸ್ಯ ರಾಮಣ್ಣ ರಿತ್ತಿ, ಶೇಕಣ್ಣ ಗಡಗಿ, ಶಿವಯೋಗಿ ಅಂಕಲಕೋಟಿ, ಈಶ್ವರಪ್ಪ ಲಮಾಣಿ, ಜಿ.ಆರ್. ಕೊಪ್ಪದ, ಪರಸಣ್ಣ ಮುಳಗುಂದ, ಮಂಜುನಾಥ ಮುಳಗುಂದ, ಕಾಂತೇಶ ಡಾಂಬರ್, ಶಿವಪ್ಪ ಲಮಾಣಿ, ಹರೀಶ ಲಮಾಣಿ, ಹನಮಂತಪ್ಪ ಲಮಾಣಿ, ಜಗದೀಶ ಪಾಟೀಲ, ಸೋಮು ಬಸರಿ ಸೇರಿದಂತೆ  ಹಾಜರಿದ್ದರು.

ಪ್ರತಿಕ್ರಿಯಿಸಿ (+)