ಮಂಗಳವಾರ, ನವೆಂಬರ್ 19, 2019
29 °C
ವಿಧಾನ ಸಭಾ ಚುನಾವಣೆ -2013

ಅಭ್ಯರ್ಥಿಗಳ ವೆಚ್ಚ ನಿಗಾ: ಅಧಿಕಾರಿಗಳ ನೇಮಕ

Published:
Updated:

ರಾಯಚೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ಭರಿಸುವ ಚುನಾವಣಾ ವೆಚ್ಚಗಳ ಬಗ್ಗೆ ಪ್ರತಿನಿತ್ಯ ಮೇಲ್ವಿಚಾರಣೆ ಮಾಡುವ ಕುರಿತು ಜಿಲ್ಲಾಧಿಕಾರಿ ಅಧಿಕಾರಿಗಳನ್ನು ನೇಮಿಸಿದ್ದಾರೆ. ಅಧಿಕಾರಿಗಳ ವಿವರ ಇಂತಿದೆ.53-ರಾಯಚೂರು ಗ್ರಾಮೀಣ ಪ್ರದೇಶ- ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಕೃಷ್ಣಪ್ಪ, ಲೆಕ್ಕ ಪರಿಶೋಧನಾ ಇಲಾಖೆಯ ಆಡಿಟ್ ಅಧಿಕಾರಿ ಮಲ್ಲಿಕಾರ್ಜುನ ಮೊಬೈಲ್ (9945908885) ಅವರು ಮೆಲ್ವಿಚಾರಣೆ ಅಧಿಕಾರಿಗಳಾಗಿ ಹಾಗೂ ಲೆಕ್ಕಾಧೀಕ್ಷಕ ಯಮುನಪ್ಪ ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.54-ರಾಯಚೂರು ವಿಧಾನ ಸಭಾ ಕ್ಷೇತ್ರ-  ಖಾಜಾ ಅಬೀದ ಹುಸೇನ್, ಪರಿಶೋಧನಾ ಅಧಿಕಾರಿ, ಮೇಲ್ವಿಚಾರಣಾ ಅಧಿಕಾರಿಯಾಗಿ ಹಾಗೂ ತಾಲ್ಲೂಕು ಪಂಚಾಯಿತಿ ರಾಯಚುರು ಕಚೇರಿಯ ಲೆಕ್ಕ ಪರಿಶೋಧಕರಾದ ತಿಮ್ಮೋರೆಡ್ಡಿ ಅವರು ಸಹಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 55- ಮಾನ್ವಿ ವಿಧಾನ ಸಭಾ ಕ್ಷೇತ್ರ-  ಮಾನ್ವಿ ಎಪಿಎಂಸಿ ಸಹಾಯಕ ಕಾರ್ಯದರ್ಶಿಗಳಾದ ಹರೀಶ್ ಮೇಲ್ವಿಚಾರಣಾಧಿಕಾರಿಗಳಾಗಿ ಹಾಗೂ ರಾಯಚೂರು ನಗರಸಭೆಯ ಲೆಕ್ಕಾಧೀಕ್ಷಕ ಗೋಪಾಲಕೃಷ್ಣ ಹಾಗೂ ಸ್ಥಳಿಯ ಲೆಕ್ಕ ಪರಿಶೋಧನಾ ಇಲಾಖೆಯ ಆಡಿಟರ್ ಪ್ರಕಾಶ ಬಾಬು ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.56- ದೇವದುರ್ಗ ವಿಧಾನ ಸಭಾ ಕ್ಷೇತ್ರ- ರಾಯಚೂರು ಬಿಎಸ್‌ಎನ್‌ಎಲ್ ಮುಖ್ಯ ಲೆಕ್ಕ ಅಧಿಕಾರಿ ಕರಿಯಪ್ಪ (ಮೊಬೈಲ್ -9449012350) ಮೇಲ್ವಿಚಾರಕರಾಗಿ,  ಚಿಕ್ಕ ಹೊನ್ನಕುಣಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯ ಆಡಿಟರ್ ರಂಗಣ್ಣ ಅಯ್ಯೊಳ ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.57- ಲಿಂಗಸುಗೂರು ವಿಧಾನ ಸಭಾ ಕ್ಷೇತ್ರ- ರಾಯಚೂರು ಸ್ಥಳೀಯ ಲೆಕ್ಕ ಪರಿಶೋಧನಾ ಕಚೇರಿಯ ಆಡಿಟರ್ ಪರಸಪ್ಪ ಮೇಲ್ವಿಚಾರಕ ಅಧಿಕಾರಿಗಳಾಗಿ ಹಾಗೂ ಲಿಂಗಸುಗೂರು ಪದವಿ ಪೂರ್ವ ಕಾಲೇಜು ಅಧೀಕ್ಷಕರಾದ ಬಸವರಾಜ ಆರ್ಯ ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

58- ಸಿಂಧನೂರು ವಿಧಾನ ಸಭಾ ಕ್ಷೇತ್ರ-  ಸಿಂಧನೂರು ನಗರಸಭೆಯ ಲೆಕ್ಕ ಅಧೀಕ್ಷಕ ಅಬ್ದುಲ್ ಅವರು ಮೇಲ್ವಿಚಾರಕರಾಗಿ ಹಾಗೂ  ಸಿಂಧನೂರು ನಂ-3 ಕಾಲುವೆ ವಿಭಾಗದ ಪ್ರಥಮ ದರ್ಜೆ ಲೆಕ್ಕ ಸಹಾಯಕ  ಜಗದೇವಪ್ಪ ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸುವರು.59- ಮಸ್ಕಿ ವಿಧಾನ ಸಭಾ ಕ್ಷೇತ್ರ-  ಸಿಂಧನೂರು ನಂ- 3 ಕಾಲುವೆ ವಿಭಾಗದ ಪರಿಶೋಧನಾಧಿಕಾರಿ ವೆಂಕಟೇಶ ಮಠದ್ ಅವರು ಮೇಲ್ವಿಚಾರಕ ಅಧಿಕಾರಿಗಳಾಗಿ ಹಾಗೂ ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಲೆಕ್ಕ ಅಧೀಕ್ಷಕ ಮದ್ದುರಾವ ದೇಶಪಾಂಡೆ ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಪ್ರತಿಕ್ರಿಯಿಸಿ (+)