ಗುರುವಾರ , ನವೆಂಬರ್ 21, 2019
20 °C

ಅಭ್ಯರ್ಥಿಗೆ ರಾಗಿ ಗಂಜಿ ಆತಿಥ್ಯ

Published:
Updated:

ಬೆಂಗಳೂರು: ಸರ್ ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಲತಾ ಸುರೇಶ್‌ರಾಜ್ ಅವರು ಚುನಾವಣೆ ಪ್ರಚಾರಕ್ಕೆ ಮನೆ ಮನೆಗೆ ತೆರಳಿದಾಗ ಅವರಿಗೆ ಜನರಿಂದಲೇ ರಾಗಿ ಗಂಜಿ, ಮಜ್ಜಿಗೆ ಆತಿಥ್ಯ ಕಾದಿತ್ತು.ಕ್ಷೇತ್ರದ ಕೃಷ್ಣಯ್ಯನಪಾಳ್ಯ ಹಾಗೂ ಎನ್‌ಜಿಇಎಫ್ ಕಾಲೋನಿಗಳಲ್ಲಿ ಹೇಮಲತಾ ತಮ್ಮ ಬೆಂಬಲಿಗರೊಂದಿಗೆ ಮತ ಯಾಚನೆಗೆ ಹೋದಾಗ ಅಭ್ಯರ್ಥಿಗೆ ಮಾತ್ರವಲ್ಲದೆ ಪ್ರಚಾರಕ್ಕೆ ಬಂದಿದ್ದ ಬೆಂಬಲಿಗರಿಗೆಲ್ಲ ರಾಗಿ ಗಂಜಿ, ಮಜ್ಜಿಗೆ ನೀಡಲಾಯಿತು.ಮಧ್ಯಾಹ್ನದ ಉರಿಬಿಸಿಲಲ್ಲಿ ಪ್ರಚಾರಕ್ಕೆ ಬಂದಿದ್ದಾರೆ ಆದ್ದರಿಂದಲೇ  ಮಜ್ಜಿಗೆ ನೀಡಿದೆವು ಎಂದು ಸ್ಥಳೀಯರಾದ ವೀಣಾ ಹಾಗೂ ರತ್ನಮ್ಮ ಹೇಳಿದರು.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದ ಅವಧಿಯಲ್ಲಿ ಜಾರಿಯಾದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವುದಾಗಿ ಹೇಮಲತಾ ಹೇಳಿದರು.

ಪ್ರತಿಕ್ರಿಯಿಸಿ (+)