ಶನಿವಾರ, ಜೂನ್ 12, 2021
24 °C

ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ವಿರೋಧಿಸಿ ಸ್ಪರ್ಧೆಗೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಧಾನದಿಂದ ಬೇಸ­ತ್ತಿರುವ ಹಿರಿಯ ನಾಯಕ ಮತ್ತು ಸುಂದರಗಡದ ಸಂಸದ ಹೇಮಾ­ನಂದ  ಬಿಸ್ವಾಲ್‌ ಈ ಬಾರಿ ಸ್ಪರ್ಧಿಸ­ದಿರಲು ನಿರ್ಧರಿಸಿದ್ದಾರೆ.‘ನನ್ನ ನಿರ್ಧಾರವನ್ನು ಹೈಕ­ಮಾಂಡ್‌ ಮತ್ತು ಆಯ್ಕೆ ಪ್ರಕ್ರಿಯೆ­ಯಲ್ಲಿ ಭಾಗಿಯಾದ ಇತರರಿಗೆ ತಿಳಿಸಿದ್ದೇನೆ. ನನ್ನ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೂಡ ನನ್ನ ಅಭಿ­ಪ್ರಾಯ ಕೇಳಿಲ್ಲ’ ಎಂದು ಹೇಮಾ­ನಂದ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಸುಂದರಗಡ ಕ್ಷೇತ್ರದಿಂದ ಕಾಂಗ್ರೆಸ್‌ ಹೇಮಾನಂದ ಅವರಿಗೆ ಟಿಕೆಟ್‌ ನೀಡಿದೆ.ಧೆನ್‌ಕನಲ್‌ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿದ್ದರಿಂದಾಗಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ಹಿರಿಯ ನಾಯಕ ಕೆ.ಪಿ. ಸಿಂಗ್‌ದೇವ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.ಮಾಜಿ ಮುಖ್ಯಮಂತ್ರಿ ಗಿರಿಧರ್‌ ಗಮಂಗ್‌ ಅವರ ಪತ್ನಿ ಹೇಮಾ ಗಮಂಗ್‌ ಕೂಡ ಕಳೆದ ವಾರ ಕಾಂಗ್ರೆಸ್‌ ತೊರೆದು ಬಿಜೆಡಿ ಸೇರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.