ಶನಿವಾರ, ಮಾರ್ಚ್ 6, 2021
21 °C
ಅಪಾರ ಬೆಂಬಲಿಗರ ಜತೆ 2ನೇ ನಾಮಪತ್ರ ಸಲ್ಲಿಕೆ

ಅಭ್ಯರ್ಥಿ ನಾಮಪತ್ರಕ್ಕೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭ್ಯರ್ಥಿ ನಾಮಪತ್ರಕ್ಕೆ ಪೂಜೆ

ಕೋಲಾರ: ಲೋಕಸಭೆ ಚುನಾವಣೆಗೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ಅಭ್ಯರ್ಥಿ ಎಂ.ನಾರಾ­ಯಣಸ್ವಾಮಿ ನಗರದ ಕೋಲಾರಮ್ಮ ದೇವಸ್ಥಾನಕ್ಕೆ ಶುಕ್ರವಾರ ಸಾವಿರಾರು ಬೆಂಬಲಿಗರೊಡನೆ ತೆರಳಿ ನಾಮಪತ್ರ­ವನ್ನು ಕೋಲಾರಮ್ಮನ ಸನ್ನಿಧಿಗೆ ನೀಡಿ ಪೂಜೆ ಸಲ್ಲಿಸಿದರು.ಮಧ್ಯಾಹ್ನ 12.30ಕ್ಕೆ ದೇವಾಲ­ಯಕ್ಕೆ ಪತ್ನಿ ಸರಸ್ವತಮ್ಮ ಅವರೊಡನೆ ದೇವಾಲಯಕ್ಕೆ ಬಂದ ಅವರು ಗರ್ಭ­ಗುಡಿಗೆ ತೆರಳಿ ನಾಮಪತ್ರವನ್ನು ಕೋಲಾ­ರಮ್ಮ ಸನ್ನಿಧಿಯಲ್ಲಿಟ್ಟು ಇಟ್ಟು ಪೂಜೆ ಸಲ್ಲಿಸಲು ಕೋರಿದರು. ಅದ­ರಂತೆಯೇ ಅರ್ಚಕರು ಪೂಜೆ ಸಲ್ಲಿಸಿ ನಾಮಪತ್ರವನ್ನು ವಾಪಸು ನೀಡಿದರು.ನೂಕುನುಗ್ಗಲು: ಅದಕ್ಕೂ ಮುನ್ನ ನಗರದ ಶನಿಮಹಾತ್ಮ ದೇವಾಲಯ­ದಿಂದ ಕೋಲಾರಮ್ಮ ದೇವಾಲಯದ­ವರೆಗೂ ಅಭ್ಯರ್ಥಿಯು ಬೆಂಬಲಿಗ­ರೊಡನೆ ಮೆರವಣಿಗೆ ನಡೆಸಿದರು. ಪೂಜೆ ಬಳಿಕ ದೇವಾಲಯದಿಂದ ಹೊರ ಬಂದವರು ಅಲ್ಲಿಂದ ಸೋಮೇಶ್ವರ ದೇವಾಲಯ. ಹಳೇ ಬಸ್‌ ನಿಲ್ದಾಣ ವೃತ್ತ, ಮೆಕ್ಕೆ ವೃತ್ತ, ಬೃಂದಾವನ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪುವ ಹೊತ್ತಿಗೆ 1.45 ಸಮೀಪಿಸಿ­ತ್ತು. ನಾಮಪತ್ರದೊಡನೆ ಸಲ್ಲಿಸಿದ ದಾಖಲೆಗಳ ಪರಿಶೀಲನೆ ಬಳಿಕ ಮಧ್ಯಾಹ್ನ 2.06ಕ್ಕೆ ಜಿಲ್ಲಾ ಚುನಾ­ವಣಾ­ಧಿಕಾರಿ ಡಿ.ಕೆ.ರವಿ ನಾಮಪತ ಸ್ವೀಕರಿಸಿದರು.ಹೊರಗೆ ಕುಳಿತ ಪತ್ನಿ: ಅಭ್ಯರ್ಥಿ­ಯೊಡನೆ ನಾಲ್ವರು ಮಾತ್ರ ಚುನಾ­ವಣಾ­ಧಿಕಾರಿ ಬಳಿಗೆ ತೆರಳುವ ನಿಯಮ ಪಾಲನೆಯ ವಿಚಾರದಲ್ಲಿ ಗೊಂದಲ ಉಂಟಾದ ಪರಿಣಾಮವಾಗಿ ಅಭ್ಯರ್ಥಿ ಪತ್ನಿ ಸರಸ್ವತಮ್ಮ ಚುನಾವಣಾಧಿಕಾರಿ ಕಚೇರಿಯ ಹೊರಗೇ ಇರಬೇಕಾಯಿತು. ಪಡಸಾಲೆಯ ನೆಲದ ಮೇಲೆ ಕುಳಿತಿದ್ದ ಅವರ ಚಿತ್ರಗಳನ್ನು ಮಾಧ್ಯಮದವರು ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿದ್ದನ್ನು ಕಂಡ ಪಕ್ಷದ ಮುಖಂಡರು ಅವರನ್ನು ಮತ್ತೆ ಕಚೇರಿಯ ಒಳಗೆ ಕರೆದೊಯ್ದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯೊಂದಿಗೆ ಶಾಸಕರಾದ ವೈ.ರಾಮಕ್ಕ, ವೈ.ಎ.ನಾರಾಯಣ­ಸ್ವಾಮಿ, ಮಾಜಿ ಶಾಸಕ ನಂದೀಶ್‌ರೆಡ್ಡಿ ಉಪಸ್ಥಿತರಿದ್ದರು.ಮೆರವಣಿಗೆಯಲ್ಲಿ ವಿಧಾನ ಪರಿ­ಷತ್‌ ಸದಸ್ಯ ಶಿವಯೋಗಿಸ್ವಾಮಿ, ಮಾಜಿ ಶಾಸಕ ವೈ,ಸಂಪಂಗಿ, ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಖಂಡ­ರಾದ ವೈ.ಸುರೇಂದ್ರಗೌಡ, ಓಂಶಕ್ತಿ ಚಲಪತಿ, ಪಕ್ಷದ ಜಿಲ್ಲಾ ಉಸ್ತುವಾರಿ ಶಿವಕುಮಾರ್, ನಾರಾ­ಯಣಸ್ವಾಮಿ, ಸತ್ಯನಾರಾಯಣರಾವ್, ಮಹೇಶ್‌ ಸತ್ಯನಾರಾಯಣ, ಎನ್.­ಲಕ್ಷ್ಮಯ್ಯ, ಶ್ರೀರಾಂ, ಪಾರ್ಥಸಾರಥಿ, ನೀಲಿ ಕೆ.ಜಯಶಂಕರ್. ಮುನಿಸ್ವಾಮಿ ರೆಡ್ಡಿ ಪಾಲ್ಗೊಂಡಿದ್ದರು. ಲೋಕಸಭೆ ಕ್ಷೇತ್ರದ ಎಂಟೂ ಕ್ಷೇತ್ರಗಳ ಪದಾಧಿ­ಕಾರಿಗಳು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು.ಮೋದಿ ಅಲೆಯಿಂದ ಗೆಲುವು

ಎನ್‌ಡಿಎ ಸರ್ಕಾರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಶಾಸಕರಾಗಿ ತಾವು ಕೈಗೊಂಡಿರುವ ಕಾರ್ಯಗಳು, ದೇಶದಾದ್ಯಂತ ಹಬ್ಬಿರುವ ನರೇಂದ್ರಮೋದಿ  ಅಲೆ ಪಕ್ಷದ ಜಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಅಭ್ಯರ್ಥಿ ನಾರಾಯಣಸ್ವಾಮಿ ಸುದ್ದಿಗಾರರಿಗೆ ಹೇಳಿದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರಗಳು, ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆಯಂಥ ವಿಷಯಗಳು ಮತದಾರರನ್ನು ಕಂಗಾಲು ಮಾಡಿವೆ. ಹೀಗಾಗಿ ಬಿಜೆಪಿಗೆ ವ್ಯಾಪಕ ಬೆಂಬಲ ದೊರಕುವ ನಿರೀಕ್ಷೆ ಇದೆ ಎಂದರು.6 ಬಾರಿ ಸಂಸದರಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಅವರು ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಶೂನ್ಯವಾಗಿದೆ. ಷಡ್ಯಂತ್ರಗಳನ್ನು ನಡೆಸಿ ಅವರು ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿ ಅಂಥ ಅವಕಾಶ ಅವರಿಗೆ ದೊರಕುವುದಿಲ್ಲ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.