ಅಭ್ಯಾಸ ಪಂದ್ಯ: ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭ ಜಯ

7

ಅಭ್ಯಾಸ ಪಂದ್ಯ: ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭ ಜಯ

Published:
Updated:

ಚೆನ್ನೈ (ಪಿಟಿಐ): ಈ ಬಾರಿಯ ಐ.ಸಿ.ಸಿ. ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಆಫ್ರಿಕಾ ತಂಡದವರು ವಿಶ್ವಕಪ್ ತಯಾರಿಗಾಗಿ ನಡೆಯುತ್ತಿರುವ ಮೊದಲ ಅಭ್ಯಾಸದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಎಂಟು ವಿಕೆಟ್ ಸುಲಭ ಗೆಲುವು ಸಾಧಿಸಿದರು.

ಎಂ.ಎ. ಚಿದಂಬರಮ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದವರು ತಮ್ಮ ಖ್ಯಾತಿಗೆ ತಕ್ಕಂತೆ ಆಟವಾಡಿದರು. ಇತ್ತೀಚೆಗೆ ಗಾಯಗೊಂಡು ಚೇತರಿಸಿಕೊಂಡಿರುವ ಜಾಕ್ ಕಾಲಿಸ್ ತಮ್ಮ ಎಂದಿನ ಆಟಕ್ಕೆ ಕುದುರಿಕೊಂಡರು. ಮಿಂಚಿನ ಹೊಡೆತದ ಆಟವಾಡಿದ ಅವರು ಔಟಾಗದೆ 49 ರನ್‌ಗಳಿಸಿದರು.

ಆರಂಭ ಆಟಗಾರರಾದ ನಾಯಕ ಗ್ರೇಮ್ ಸ್ಮಿತ್ (41) ಹಾಗೂ ಹಾಶೀಮ್ ಅಮ್ಲಾ (45) ಉತ್ತಮ ಜೊತೆಯಾಟವಾಡಿ ಪ್ರೇಕ್ಷಕರ ಗಮನ ಸೆಳೆದರು.

ಮೊದಲು ಆಟವಾಡಿದ ಜಿಂಬಾಬ್ವೆ 41.5 ಓವರುಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಮಾಡಿತು.

ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 23.3 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿದರು.

ಸ್ಕೋರ್: ಜಿಂಬಾಬ್ವೆ: 41.5 ಓವರುಗಳಲ್ಲಿ 152; ದಕ್ಷಿಣ ಆಫ್ರಿಕಾ: 23.3 ಓವರುಗಳಲ್ಲಿ 2 ವಿಕೆಟ್‌ಗೆ 152.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry