ಅಮರನಾಥ ಪಾಟೀಲ ಬಂಧನಕ್ಕೆ ಸಿಎಂಗೆ ಮನವಿ

ಶುಕ್ರವಾರ, ಜೂಲೈ 19, 2019
23 °C

ಅಮರನಾಥ ಪಾಟೀಲ ಬಂಧನಕ್ಕೆ ಸಿಎಂಗೆ ಮನವಿ

Published:
Updated:

ಅಫಜಲಪುರ: ಜೂನ್ 8ರಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಯವರ ಆಪ್ತ ಸಹಾಯಕ ಶ್ರೀಮಂತ ಪಟ್ಟೇದಾರ ಅವರ ಮೇಲೆ ಬಯಾನ ದೌರ್ಜನ್ಯ ನಡೆಸಿ ಜಾತಿ ನಿಂದನೆ ಮಾಡಿ ಹಲ್ಲೆಗೊಳಪಡಿಸಿ ಪರಾರಿಯಾಗಿರುವ ಹೆಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ ಅವರನ್ನ ಬಂಧಿಸಿ ಅವರ ಸಂಗಡಿಗರಿಗೆ ಗುಂಡಾ ಕಾಯ್ದೆ ಅಡಿಯಲ್ಲಿ ತಕ್ಷಣ ಬಂಧಿಸಿದ ಜೈಲ್‌ಗೆ ಹಾಕಬೇಕೆಂದು ತಹಸೀಲ್ದಾರರ ಮೂಲಕ ಗುರುವಾರ ಮುಖ್ಯಮಂತ್ರಿಗೆ ವಿವಿಧ ದಲಿತ ಸಂಘಟನೆಗಳ ಸಮನ್ವಯ ಸಮಿತಿಯವರು ಮನವಿ ಪತ್ರ ಸಲ್ಲಿಸಿದರು.ಸಮಿತಿಯ ಸಂಚಾಲಕ ಭೀಮರಾಯ ಗೌರ ಮಾತನಾಡಿ ದಲಿತ ನೌಕರರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ತಲೆ ಮರಿಸಿಕೊಂಡಿರುವ ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ ಅವರನ್ನ ಬಂಧಿಸಬೇಕು ಅವರ ಅಧ್ಯಕ್ಷತೆಯನ್ನ ಕಿತ್ತಿ ವಜಾಗೊಳಿಸಬೇಕು. ಮತ್ತು ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಅತ್ಯಂತ ಲಘುವಾಗಿ ಪರಗಣಿಸುತ್ತಿರುವ ಮತ್ತು ದೌರ್ಜನ್ಯ ಪ್ರಕರಣದಲ್ಲಿ ನೊಂದವರಿಗೆ ಪರಿಹಾರ ಕೊಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿಸಿರುವ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ ಅವರನ್ನ ತಕ್ಷಣ ವಜಾಗೊಳಿಸಬೇಕು ಎಂದು ಅವರು ತಿಳಿಸಿದರು.ಮನವಿ ಪತ್ರ ನೀಡುವ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರಾದ ಸಂಗಮನಾಥ ಬಟಗೇರಾ, ಬಸವರಾಜ ಕುಲಾಲಿ, ರಮೆಶ ದೊಡ್ಡಮನಿ, ಹಸನಪ್ಪ ದೊಡ್ಡಮನಿ, ಮಹಾಲಿಂಗ ಅಂಗಡಿ, ಜೈಭೀಮ ಕಾಳೆ, ಗುರುರಾಜ ಛಲವಾದಿ, ಮಹಾಂತಪ್ಪ ಖರ್ಗೆ, ಖಾಜಪ್ಪ ಸುಲೇಕರ, ಸುಭಾಷ ನಾಯಕೊಡಿ, ಅರವಿಂದ ಎಸ್ ದೊಡ್ಡಮನಿ ಮುಂತಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry