ಅಮರನಾದ ಆನಂದ

7

ಅಮರನಾದ ಆನಂದ

Published:
Updated:
ಅಮರನಾದ ಆನಂದ

ಚಿಕ್ಕೋಡಿ: ಗಡಿನಾಡಿನ ಪ್ರತಿಭಾವಂತ ಯುವ ಕಲಾವಿದ ತಾಲ್ಲೂಕಿನ ಚಿಂಚಣಿ ಗ್ರಾಮದ ಆನಂದಕುಮಾರ ಚಿಕ್ಕೋಡಿ ಶುಕ್ರವಾರ ನಿಧನ ಹೊಂದಿದರು.ಅವರು ನಾಯಕ ನಟನಾಗಿ ಅಭಿನಯಿಸಿರುವ ಪವಿತ್ರ ಪ್ರೇಮ ಬಿಡುಗಡೆಗೆ ಮುನ್ನವೇ ವಿಧಿವಶರಾಗಿದ್ದು ದುರದೃಷ್ಟಕರವಾಗಿದೆ.ಈ ಮೊದಲು `ಪ್ರೇಮಪೂಜೆ~ ಎಂಬ ಕಿರುಚಿತ್ರವೊಂದರಲ್ಲಿ ನಟಿಸಿದ್ದ ಆನಂದಕುಮಾರ ಚಿಕ್ಕೋಡಿ ಅವರು ಗಡಿ ಭಾಗದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಭಾಗದಲ್ಲಿಯೇ ಮೊದಲ ಬಾರಿಗೆ  `ಪವಿತ್ರ ಪ್ರೇಮ~ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಚಿತ್ರೀಕರಣ ಕಾರ್ಯ ಇತ್ತೀಚಿಗಷ್ಟೇ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಅಲ್ಲಮಪ್ರಭು ಬನಶಂಕರಿ ಕ್ರಿಯೇಶನ್ ನಿರ್ಮಾಣದಲ್ಲಿ ಸಿದ್ಧಗೊಳ್ಳುತ್ತಿರುವ ಪವಿತ್ರ ಪ್ರೇಮ ಚಲನಚಿತ್ರಕ್ಕಾಗಿ ಕಳೆದ ಸುಮಾರು ಒಂದು ವರ್ಷದ ಕಾಲ ಜಿಲ್ಲೆಯ ವಿವಿಧ ಪ್ರೇಕ್ಷಣಿಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ವೃತ್ತಿಯಿಂದ ಚಿಕ್ಕೋಡಿಯಲ್ಲಿನ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ನೌಕರನಾಗಿದ್ದ ಆನಂದಕುಮಾರ ಪ್ರವೃತ್ತಿಯಿಂದ  ನಟ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಚಿತ್ರ ರಸಿಕರನ್ನು ಅಗಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry