ಮಂಗಳವಾರ, ಜೂನ್ 15, 2021
27 °C

ಅಮರನಾರಾಯಣ ವಿಜೃಂಭಣೆ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಫಾಲ್ಗುಣ ಮಾಸದ ಹೋಳಿ ಹುಣ್ಣಿಮೆಯಾದ ಭಾನುವಾರ ಕೈವಾರದ ಅಮರನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ದೇಗುಲವನ್ನು ವಿಶೇಷವಾಗಿ ಅಲಂಕರಿ­ಸ­ಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ಶ್ರೀದೇವಿ, ಭೂದೇವಿ ಸಮೇತ ಅಮರ­ನಾರಾ­ಯಣ ಉತ್ಸಮೂರ್ತಿಯನ್ನು ದೇಗು­ಲ­­ದಿಂದ ಮಂಗಳವಾದ್ಯಗಳ ಸಮೇತ ಮೆರವಣಿಗೆಯಲ್ಲಿ ತಂದು ರಥ ಪೀಠದ ಮೇಲೆ ಪ್ರತಿಷ್ಠಾಪಿಸ­ಲಾಯಿತು.ಅರ್ಚಕ ವೃಂದ ಮತ್ತೊಮ್ಮೆ ಪೂಜಾ ವಿಧಿ–-ವಿಧಾನ ಪೂರೈಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೂರದ ಸ್ಥಳಗಳಿಂದ ಆಗಮಿಸಿದ್ದ ಭಕ್ತರು ರಥವನ್ನು ಎಳೆದು ಕೃತಾರ್ಥ­ರಾದರು. ದೇಗುಲದಲ್ಲಿ ಸಾಲು ಸಾಲಾಗಿ ನಿಂತು ಪೂಜೆ ಸಲ್ಲಸಿದರು.

ಮುಖ್ಯ ರಸ್ತೆ ಮತ್ತು ದೇಗುಲದ ಸುತ್ತ ಭಕ್ತರು ಜೈಕಾರ ಹಾಕುತ್ತಾ ರಥವನ್ನು ಎಳೆದರು. ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ತೇರಿಗೆ ಹಣ್ಣು , ಧವನ ತೂರಿದರು.ಬೆಳಿಗ್ಗೆ 11.-35ಕ್ಕೆ ಅಲಂಕೃತ ರಥ­ದಲ್ಲಿ ತಾತಯ್ಯನವರ ಉತ್ಸವ ಮೂರ್ತಿ ತರಲಾಯಿತು. ದೇಗುಲದ ಪ್ರಾಂಗಣ­ದಲ್ಲಿ ಕೃಷ್ಣ ಗಂಧೋತ್ಸವ ವಿಶೇಷ ಸೇವೆ ಮಾಡಲಾಯಿತು. ಯೋಗಿನಾರೇಯಣ ಆಶ್ರಮದಲ್ಲಿ ದಾಸೋಹ ನಡೆಯಿತು. ಬಿಸಿಲ ಬೇಗೆ ತಣಿಸಲು ಸುತ್ತ ಮುತ್ತಲ ಗ್ರಾಮಸ್ಥರು ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಮಜ್ಜಿಗೆ, ಪಾನಕ, ಕೊಸಂಬರಿ ಹಾಗೂ ನೀರಿನ ಪ್ಯಾಕೆಟ್‌ ಹಂಚಿದರು. ಕೈವಾರ ವಾಸವಿ ಯುವಜನ ಸಂಘದಿಂದ ಮಜ್ಜಿಗೆ, -ಕೋಸಂಬರಿ ಸೇವೆ ನಡೆಯಿತು. ನರಸಿಂಹ­ಸ್ವಾಮಿ ಗುಹೆ ಬಳಿ ವಿವಿಧ ಸಂಘ– ಸಂಸ್ಥೆಗಳು ಅನ್ನದಾನ ಏರ್ಪಡಿ­ಸಿದ್ದರು.        ಯೋಗಿನಾರೇಯಣ ಆಶ್ರಮದ ಧರ್ಮದರ್ಶಿ ಎಂ.ಆರ್.ಜಯರಾಮ್‌, ಸಂಕೀರ್ತನೆ ಯೋಜನೆ ಸಂಚಾಲಕ ಬಾಲಕೃಷ್ಣ ಭಾಗವತರ್, ಆಶ್ರಮ ಟ್ರಸ್ಟ್‌ ಉಪಾಧ್ಯಕ್ಷ ವಿಭಾಕರರೆಡ್ಡಿ, ಸದಸ್ಯ ಕೃಷ್ಣಯ್ಯಶೆಟ್ಟಿ, ವ್ಯವಸ್ಥಾಪಕ ಲಕ್ಷ್ಮೀ­ನಾರಾಯಣ್, ಪ್ರವಚನಕಾರ ಟಿ.ಎಲ್.­ಆನಂದ್, ಮುಖಂಡರಾದ ಕೆ.ಎನ್.­ಶ್ರೀನಿ­ವಾಸನ್, ಚಂದ್ರಮೋಹನ್, ಮಂಜು­ನಾಥ್, ಅರ್ಚಕರಾದ ರಾಮ­ಕೃಷ್ಣ­ಮಾ­ಚಾರ್, ಕೃಷ್ಣಮಾಚಾರ್ ಇತರರಿದ್ದರು.ನಾದಸುಧಾರಸ ಸಾಂಸ್ಕೃತಿಕ ವೇದಿಕೆ­ಯಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಕಾರ್ಯ­ಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ರಮಾದೇವಿ ಭಾಗವತಾರಿಣಿ ಮತ್ತು ವೃಂದದಿಂದ ಹರಿಕಥೆ, ಎ.ಎಲ್.­ವೆಂಕಟೇಶ್ ತಂಡದಿಂದ ಬುರ್ರಕಥೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.