ಅಮಾನತು ಹಿಂದಕ್ಕೆ ಸಂಭವ

7
‘ವಿಷಾದ ವ್ಯಕ್ತಪಡಿಸಿದ’ ದುರ್ಗಾಶಕ್ತಿ ನಾಗಪಾಲ್‌

ಅಮಾನತು ಹಿಂದಕ್ಕೆ ಸಂಭವ

Published:
Updated:

ಲಖನೌ: ನಿರ್ಮಾಣ ಹಂತದಲ್ಲಿದ್ದ ಮಸೀದಿ ತಡೆಗೋಡೆ ಕೆಡವಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಎಎಸ್‌ ಅಧಿಕಾರಿ ದುಗಾರ್ಶಕ್ತಿ ನಾಗಪಾಲ್‌ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಬಳಿ ವಿಷಾದ ವ್ಯಕ್ತಪಡಿಸಿದ್ದು, ಸರ್ಕಾರ ಅವರ ಅಮಾನತು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ.ಮೂಲಗಳ ಪ್ರಕಾರ, ದುರ್ಗಾಶಕ್ತಿ ನಾಗಪಾಲ್‌ ಅವರು ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರನ್ನು ಭೇಟಿ ಮಾಡಿ, ಅಮಾನತು ಆದೇಶವನ್ನು   ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೇ, ಮಸೀದಿ ಗೋಡೆಯನ್ನು ಬೀಳಿಸಿದ ಪ್ರಕರಣದ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಅವರ ಪತಿ ಐಎಎಸ್‌ ಅಧಿಕಾರಿ ಅಭಿಷೇಕ್‌ ಸಿಂಗ್‌ ಕೂಡ ಜೊತೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry