ಬುಧವಾರ, ಜನವರಿ 22, 2020
28 °C

ಅಮಾವಾಸ್ಯೆಗೆ ಲಕ್ಷ ದೀಪೋತ್ಸವದ ಮೆರುಗು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮಾವಾಸ್ಯೆಗೆ ಲಕ್ಷ ದೀಪೋತ್ಸವದ ಮೆರುಗು...

ಆನೇಕಲ್‌: ಪಟ್ಟಣದಲ್ಲಿ ಕಾರ್ತೀಕ ಅಮಾವಸ್ಯೆ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಕಾರ್ಯ ಕ್ರಮಗಳು ವಿಜೃಂಭಣೆಯಿಂದ ನಡೆದವು.

ಕಂಬದ ಗಣಪತಿ ಹಾಗೂ ಅಮೃತ ಮಲ್ಲಿ ಕಾರ್ಜುನ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.

ಲಕ್ಷ ದೀಪೋತ್ಸವ ಹಮ್ಮಿಕೊಳ್ಳ ಲಾಗಿತ್ತು.ಸಹಸ್ರಾರು ಭಕ್ತರು ಸಾಲಿನಲ್ಲಿ ಬಂದು ಸಾಲು ದೀಪಗಳನ್ನು ಹಚ್ಚಿ ದೇವರ ದರ್ಶನ ಪಡೆದು ಸಂಭ್ರಮಿಸಿದರು.ಥಳಿ ರಸ್ತೆಯಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಕಾರ್ತೀಕ ಅಮಾವಸ್ಯೆ ಪ್ರಯುಕ್ತ ಸ್ವಾಮಿಗೆ ಅಭಿಷೇಕ, ಪೂಜೆ, ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.ದೊಡ್ಡಕೆರೆ ಬಾಗಿಲಿನ ಪಟ್ಟಾಭಿರಾಮ ದೇವಾಲಯದಲ್ಲಿ ಕಾರ್ತೀಕ ಅಮಾವಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವ ಏರ್ಪಡಿಸಲಾಗಿತ್ತು.ಬನ್ನೇರುಘಟ್ಟ ರಸ್ತೆಯ ಶನಿಮಹಾತ್ಮ ದೇವಾಲಯ ಹಾಗೂ ಚಿನ್ನಪ್ಪ ಸ್ವಾಮಿ ದೇವಾಲಯದಲ್ಲಿ ಕಡಲೆ ಕಾಯಿ ಪರಿಷೆ ನಡೆಯಿತು. ಭಕ್ತರು ಕಡಲೆಕಾಯಿಯನ್ನು ದೇವಾಲಯ ಗೋಪುರಕ್ಕೆ ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಿದ್ದ ದೃಶ್ಯ ಕಂಡುಬಂದಿತು.ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು

ಪ್ರತಿಕ್ರಿಯಿಸಿ (+)