ಅಮಿತಾಭ್‌ಗೆ ಮಧುಮೇಹ ಪರೀಕ್ಷಾ ಘಟಕ ಉಡುಗೊರೆ

7

ಅಮಿತಾಭ್‌ಗೆ ಮಧುಮೇಹ ಪರೀಕ್ಷಾ ಘಟಕ ಉಡುಗೊರೆ

Published:
Updated:
ಅಮಿತಾಭ್‌ಗೆ ಮಧುಮೇಹ ಪರೀಕ್ಷಾ ಘಟಕ ಉಡುಗೊರೆ

ಲಂಡನ್ (ಪಿಟಿಐ): ಬಾಲಿವುಡ್ ಬಿಗ್ `ಬಿ~ ಅಮಿತಾಭ್ ಬಚ್ಚನ್‌ಗೆ ಗುರುವಾರ 70ನೇ ಹುಟ್ಟುಹಬ್ಬದ ಸಂಭ್ರಮ.

ಈ ಸಂದರ್ಭದಲ್ಲಿ ಇಂಗ್ಲೆಂಡ್‌ನ ಅವರ ಅಭಿಮಾನಿ ಏಷ್ಯಾ ಮೂಲದ ಸಂಸದ ಕೀತ್ ವಾಜ್  ಅವರು ಅಮಿತಾಭ್‌ಗೆ `ಸಂಚಾರಿ ಮಧುಮೇಹ ಚಿಕಿತ್ಸಾ ಘಟಕವನ್ನು~ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡುತ್ತಿದ್ದಾರೆ.ಭಾರತದಲ್ಲಿರುವ ಬ್ರಿಟನ್ ಹೈಕಮಿಷನರ್ ಅವರಿಂದ ಮುಂಬೈನ ಸೆವನ್ ಹಿಲ್ಸ್ ಆಸ್ಪತ್ರೆಯಲ್ಲಿ ಅಮಿತಾಭ್ ಬಚ್ಚನ್ ಈ ಉಡುಗೊರೆಯನ್ನು ಸ್ವೀಕರಿಸಲಿದ್ದಾರೆ. ಮುಂಬೈಗೆ ಬರುತ್ತಿರುವ ಮೊಟ್ಟ ಮೊದಲ ಸಂಚಾರಿ ಘಟಕ ಇದು. ಇಂಥ ಘಟಕಗಳು ಲಂಡನ್ ಮತ್ತು ಲೈಸೆಸ್ಟರ್ ಹಾಗೂ ಭಾರತದ ಗೋವಾದಲ್ಲಿದೆ.ಬಚ್ಚನ್ ಹುಟ್ಟುಹಬ್ಬಕ್ಕೆ ನೀಡುತ್ತಿರುವುದರಿಂದ ಈ ಸಂಚಾರಿ ಮಧುಮೇಹ ಘಟಕಕ್ಕೆ `ಅಮಿತಾಭ್~ ಎಂದು ಹೆಸರಿಡಲಾಗಿದೆ.ಮೊಬೈಲ್‌ನಲ್ಲಿ `ಬಿಗ್ ಬಿ~

ಕೋಲ್ಕತ್ತ (ಪಿಟಿಐ): ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ 70ನೇ ವರ್ಷದ ಹುಟ್ಟುಹಬ್ಬಕ್ಕೆ (ಗುರುವಾರ) `ಟೆಕ್‌ಝೋನ್~ ಕಂಪೆನಿಯು ಮೊಬೈಲ್ ಫೋನ್‌ನ ಅಪ್ಲಿಕೇಶನ್‌ವೊಂದನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಿದೆ. ಅಭಿಮಾನಿಗಳು ಇದಕ್ಕಾಗಿ ಮುಗಿಬಿದ್ದಿದ್ದಾರೆ.`ಟೆಕ್‌ಝೋನ್~ ಕಂಪೆನಿಯು ಬಚ್ಚನ್ ಅವರ ಹುಟ್ಟುಹಬ್ಬಕ್ಕೆಂದೇ ವಿಶಿಷ್ಟವಾದ `ಬಿಗ್‌ಬಿ~ ಅಪ್ಲಿಕೇಶನ್ ಮತ್ತು `ಡಬ್ಲ್ಯುಎಪಿ~ ಪೇಜ್ ಅನ್ನು ವಿನ್ಯಾಸ ಮಾಡಿ `ಬಿಗ್ ಬಿ~ ಅವರಿಗೆ ಸಂಬಂಧಿಸಿದ ಸ್ಪರ್ಧೆಗೆ ಅಭಿಮಾನಿಗಳನ್ನು  ಸೆಳೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry