ಅಮಿತಾಭ್‌ಗೆ 4ನೇ ಡಾಕ್ಟರೇಟ್

7

ಅಮಿತಾಭ್‌ಗೆ 4ನೇ ಡಾಕ್ಟರೇಟ್

Published:
Updated:

ನವದೆಹಲಿ, (ಪಿಟಿಐ):ಭಾರತೀಯ ವಿದ್ಯಾರ್ಥಿಗಳ ಮೇಲಿನ ಜನಾಂಗೀಯ ದಾಳಿ ಖಂಡಿಸಿ ಆಸ್ಟ್ರೇಲಿಯ ವಿಶ್ವವಿದ್ಯಾಲಯ ಎರಡು ವರ್ಷಗಳ ಹಿಂದೆ ಪ್ರಕಟಿಸಿದ್ದ ಗೌರವ ಡಾಕ್ಟರೇಟ್ ಸ್ವೀಕರಿಸಲು ಬಿಗ್ ಬಿ ಅಮಿತಾಭ್ ಬಚ್ಚನ್ ಕೊನೆಗೂ ಸಮ್ಮತಿಸಿದ್ದಾರೆ. ಇದು ಅವರಿಗೆ ನಾಲ್ಕನೇ ಗೌರವ ಡಾಕ್ಟರೇಟ್ ಪದವಿಯಾಗಿದೆ.69 ವರ್ಷ ವಯಸ್ಸಿನ ಅಮಿತಾಭ್ ಬಚ್ಚನ್ ಸಿನಿಮಾಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಬ್ರಿಸ್ಬೇನ್‌ನ ಕ್ವೀನ್ಸ್‌ಲ್ಯಾಂಡ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು.ಕ್ವೀನ್ಸ್‌ಲ್ಯಾಂಡ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ (ಕ್ಯೂಯುಟಿ)ಯು ಅಕ್ಟೋಬರ್ 20ರಂದು ಬ್ರಿಸ್ಬೇನ್‌ನಲ್ಲಿ ನನಗೆ ಡಾಕ್ಟರೇಟ್ ನೀಡಿ ಗೌರವಿಸಲಿದೆ. ಅದಕ್ಕೆ ಹೃತ್ಪೂರ್ವಕ ಕೃತಜ್ಞತೆ ಎಂದು ಅಮಿತಾಭ್ ಬಚನ್ ಸಿಡ್ನಿಯಿಂದ ಟ್ವಿಟ್‌ನಲ್ಲಿ ಬರೆದಿದ್ದಾರೆ. ಅಮಿತಾಬ್ ಅವರ ಮೊದಲ ಹಾಲಿವುಡ್ ಚಿತ್ರ `ದ ಗ್ರೇಟ್ ಗಟ್ಸ್‌ಬಿ~ ಸಿಡ್ನಿಯಲ್ಲಿಯೇ ಚಿತ್ರೀಕರಣವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry