ಅಮಿತಾಭ್- ಜಯಾ 39ನೇ ವಿವಾಹ ವಾರ್ಷಿಕೋತ್ಸವ

7

ಅಮಿತಾಭ್- ಜಯಾ 39ನೇ ವಿವಾಹ ವಾರ್ಷಿಕೋತ್ಸವ

Published:
Updated:
ಅಮಿತಾಭ್- ಜಯಾ 39ನೇ ವಿವಾಹ ವಾರ್ಷಿಕೋತ್ಸವ

ಮುಂಬೈ(ಪಿಟಿಐ): ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ನಟಿ ಜಯಾಬಾಧುರಿ ಅವರು ಭಾನುವಾರ ತಮ್ಮ 39ನೇ ವಿವಾಹ ಮಹೋತ್ಸವವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರು ತಮ್ಮ  ಮದುವೆ ದಿನಗಳ ಹಳೆಯ ನೆನಪುಗಳನ್ನು ಬ್ಲಾಗ್‌ನಲ್ಲಿ ಮೆಲುಕು ಹಾಕಿದ್ದಾರೆ.  1973ರ ಜೂನ್ 3ರಂದು ತಮ್ಮ ಮದುವೆಯನ್ನು ತ್ವರಿತವಾಗಿ ನಡೆಸಿ `ಝಂಜೀರ್~ ಸಿನಿಮಾದ ಯಶಸ್ಸನ್ನು ಜಯಾ ಜತೆ ಆಚರಿಸಲು ತಾವು ಬಯಸಿದ್ದನ್ನು  69 ವರ್ಷದ ಅಮಿತಾಭ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

 `ನನ್ನ ವಿವಾಹವಾಗಿ ಇಂದಿಗೆ 39 ವರ್ಷಗಳು ಆಗಿವೆ, ಕುಟುಂಬದವರು ಹಾಗೂ ಮಿತ್ರವರ್ಗ ಶುಭಾಶಯ ಕೋರಲು ಸೇರಿದ್ದಾರೆ. ಈ ಸಂದರ್ಭದಲ್ಲಿ ಹಳೆಯ ಮಧುರ ನೆನಪುಗಳನ್ನು ಮತ್ತೆ ಮೆಲುಕು ಹಾಕುತ್ತಿದ್ದೇನೆ~ ಎಂದು ಬ್ಲಾಗ್‌ನಲ್ಲಿ ಅಮಿತಾಭ್ ಹೇಳಿಕೊಂಡಿದ್ದಾರೆ.` ಝಂಜೀರ್ ಸಿನಿಮಾ ಆಗ ತಾನೇ ಬಿಡುಗಡೆಯಾಗಿ ಯಶಸ್ಸು ಪಡೆದಿದ್ದ ಕಾರಣ  ಜಯಾ, ನಾನು ಹಾಗೂ ಕೆಲವು ಮಿತ್ರರು  ಲಂಡನ್‌ನಲ್ಲಿ ರಜಾ ದಿನವನ್ನು ಕಳೆಯಲು ನಿರ್ಧರಿಸ್ದ್ದಿದೆವು. ಆದರೆ ನನ್ನ ತಂದೆ ತಾಯಿ ಅವರು ವಿವಾಹವಾಗಿ ನಂತರ ಲಂಡನ್ ಹೋಗಿ ಎಂದರು~ ಎಂದು ಸ್ಮರಿಸಿದ್ದಾರೆ. `ನಾನು ವಿಧೇಯ ಮಗನಾಗಿದ್ದು, ಅವರ ಮಾತು ಕೇಳಿದೆ. ಅತ್ಯಂತ ತರಾತುರಿಯಲ್ಲಿ ಮರುದಿನವೇ ನನ್ನ  ವಿವಾಹ ನಡೆಯಿತು. ಕೇವಲ ಕುಟುಂಬಸದಸ್ಯರು ಹಾಗೂ ಆಪ್ತ ಸ್ನೇಹಿತರು ಮಾತ್ರ  ಪಾಲ್ಗೊಂಡಿದ್ದರು. ಅದ್ದೂರಿಯಾಗಿ ವಿವಾಹ ಸಮಾರಂಭ ನಡೆಸಲು ಸಮಯದ ಅಭಾವ ಇದ್ದ ಕಾರಣ  ಸರಳವಾಗಿ ಬಂಗಾಳಿ ಸಂಪ್ರದಾಯದ ಪ್ರಕಾರ ನಡೆಯಿತು. ವಿವಾಹವಾದ ಅದೇ ದಿನ ರಾತ್ರಿ  ಪ್ರವಾಸಕ್ಕೆ ಹೊರಟೆ~ ಎಂದು ಅಂದಿನ ದಿನಗಳನ್ನು ಸ್ಮರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry