ಮಂಗಳವಾರ, ನವೆಂಬರ್ 12, 2019
28 °C

ಅಮಿತ್ ಕುಮಾರ್‌ಗೆ ಚಿನ್ನ

Published:
Updated:
ಅಮಿತ್ ಕುಮಾರ್‌ಗೆ ಚಿನ್ನ

ನವದೆಹಲಿ (ಪಿಟಿಐ): ಭಾರತದ ಅಮಿತ್ ಕುಮಾರ್ ಧಂಕರ್ `ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್'ನ ಪುರುಷರ 66 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದುಕೊಂಡರು.ಇಲ್ಲಿನ ಕೆ.ಡಿ ಜಾಧವ್ ಕುಸ್ತಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಈ ವಿಭಾಗದಲ್ಲಿ ಸೋಮವಾರ ಚಿನ್ನದ ಪದಕ ಗೆಲ್ಲುವ ಮೂಲಕ ಅಮಿತ್ ಭಾರತದ ಪಾಳಯದಲ್ಲಿ ಸಂಭ್ರಮ ತಂದರು.ಅಮಿತ್ ಫೈನಲ್‌ನಲ್ಲಿ  0-1, 4-0, 3-2ರಿಂದ ಮಂಗೋಲಿಯಾದ ಎಮ್. ಗಾಂಜೋರಿಗ್ ವಿರುದ್ಧ ಜಯ ಸಾಧಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಮ್ಮ ನೆಲದಲ್ಲೇ ಟೂರ್ನಿ ಆಯೋಜನೆಗೊಂಡಿದ್ದ ಕಾರಣ ನಾನು ಪದಕ ಗೆಲ್ಲಲೇಬೇಕೆಂದು ಬಯಸಿದ್ದೆ. ನಿರೀಕ್ಷೆಗಳನ್ನು ತಲುಪಿದ್ದೇನೆ ಎಂಬ ಸಂತೃಪ್ತಿ ನನಗಿದೆ' ಎಂದರು.ಈ ಮೊದಲು ಅಮಿತ್ ಸೆಮಿಫೈನಲ್‌ನಲ್ಲಿ 0-1, 4-4, 4-0ಯಿಂದ ಉಜ್ಬೆಕಿಸ್ತಾನ ರುಸ್ಲಾನ್ ಪ್ಲೀವ್ ಅವರನ್ನು ಮಣಿಸಿದ್ದರು.

ಇದೇ ವೇಳೆ, ಪುರುಷರ 84 ಕೆ.ಜಿ ವಿಭಾಗದಲ್ಲಿ ನರಸಿಂಗ್ ಪಂಚಮ್ ಸಿಂಗ್ 6-0, 8-0ಯಿಂದ ಇರಾಕ್‌ನ ಅಲಿ ಹಶಮ್ ಮಜೀದ್ ವಿರುದ್ಧ ಜಯ ಸಾಧಿಸಿ ಕಂಚಿನ ಪದಕ ಗೆದ್ದರು.ಈ ಟೂರ್ನಿಯಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಆರು ಕಂಚಿನ ಪದಕ ಗೆದ್ದುಕೊಂಡ ಭಾರತ ಫ್ರೀ ಸ್ಟೈಲ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆಯಿತು.

ಪ್ರತಿಕ್ರಿಯಿಸಿ (+)