ಅಮೀರ್‌ಗೆ ಮಹಾಭಾರತದ ಕನಸು

7
ಪಂಚರಂಗಿ

ಅಮೀರ್‌ಗೆ ಮಹಾಭಾರತದ ಕನಸು

Published:
Updated:

ನಟ ಅಮೀರ್ ಖಾನ್‌ಗೆ ಮಹಾಭಾರತವನ್ನು ಹಿರಿತೆರೆಗೆ ತರುವ ಮಹತ್ವಾಕಾಂಕ್ಷೆ ಇದೆ. ಆದರೆ ಅದಕ್ಕೆ ತಮ್ಮ ಬದುಕಿನ 20 ವರ್ಷಗಳನ್ನು ಮೀಸಲಿಡಬೇಕಾದೀತೇನೋ ಎಂಬ ಅಳುಕೂ ಇದೆ. `ಮಹಾಭಾರತವನ್ನು ತೆರೆಗೆ ತರುವುದು ನನ್ನ ದೊಡ್ಡ ಕನಸು.ಅದರಲ್ಲಿ ಕರ್ಣನ ಪಾತ್ರವನ್ನು ನಾನೇ ಮಾಡಬೇಕು ಎಂಬ ಬಯಕೆ ಮೊದಲು ಇತ್ತು. ಆದರೆ ಕರ್ಣ ಆರೂವರೆ ಅಡಿ ಎತ್ತರದ ದಿಟ್ಟ ವ್ಯಕ್ತಿ. ನಾನು ಅಷ್ಟು ಎತ್ತರವಿಲ್ಲ. ಹಾಗಾಗಿ ಕೃಷ್ಣನ ಪಾತ್ರವನ್ನು ಮಾಡಿದರೆ ಚೆನ್ನ ಎಂದುಕೊಂಡೆ. ಈ ಯೋಜನೆ ನನ್ನ ಕನಸೂ ಹೌದು, ದುಃಸ್ವಪ್ನವೂ ಹೌದು. ಈಗಲೇ ಜನ ಒಂದು ಸಿನಿಮಾ ಮಾಡಲು ಮೂರು ವರ್ಷ ತೆಗೆದುಕೊಳ್ಳುತ್ತಾನೆ ಎಂದು ದೂರುತ್ತಾರೆ.

ಇನ್ನು ಮಹಾಭಾರತ ಮಾಡಿದರೆ 20 ವರ್ಷ ತೆಗೆದುಕೊಂಡನಲ್ಲ ಎಂದಾರು. ಹೀಗಾಗಿ ಮಹತ್ವಾಕಾಂಕ್ಷೆಯ ಜೊತೆಗೆ ಅಳುಕೂ ಇರುವುದರಿಂದ ಆ ಸಿನಿಮಾ ಮಾಡುವುದು ಸುಲಭವಲ್ಲ' ಎಂದಿದ್ದಾರೆ ಅಮೀರ್.ಚಿಕ್ಕಂದಿನಲ್ಲಿ ಅಮೀರ್ ತಾಯಿ ಅವರನ್ನು ಕೃಷ್ಣ ಎಂದೇ ಕರೆಯುತ್ತಿದ್ದರಂತೆ. ಯಾಕೆಂದರೆ ಅವರನ್ನು ಹುಡುಗಿಯರು ಮುತ್ತುತ್ತಿದ್ದದ್ದೇ ಹೆಚ್ಚು. ಅದನ್ನು ನೆನಪಿಸಿಕೊಂಡು ಕೆನ್ನೆ ಕೆಂಪಾಗಿಸಿಕೊಳ್ಳುವ ಅಮೀರ್ ಮಹಾಭಾರತ ಮಾಡುವ ಬಯಕೆಯನ್ನಂತೂ ಉಜ್ಜುತ್ತಿದ್ದಾರೆ.`ತಲಾಶ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಹರ್ಷಗೊಂಡಿರುವ ಅವರಿಗೆ `ಸತ್ಯಮೇವ ಜಯತೇ' ಕಾರ್ಯಕ್ರಮದ ಇನ್ನೊಂದಷ್ಟು ಕಂತುಗಳನ್ನು ಮಾಡುವ ಆಸೆಯೂ ಇದೆ. ಈ ಹಿಂದೆ ಪ್ರಸಾರವಾದ ಒಂದು ಕಂತಿನಲ್ಲಿ ದಯಾಮರಣದ ಕುರಿತು ಮಾತನಾಡಿದ್ದ ಒಬ್ಬನು ಹತ್ಯೆಗೀಡಾದ ಪ್ರಸಂಗ ನಡೆಯಿತು. ಅದರ ಕುರಿತು ಬೇಸರ ವ್ಯಕ್ತಪಡಿಸುವ ಅಮೀರ್‌ಗೆ ರಾಜಕೀಯ ರಂಗ ಪ್ರವೇಶಿಸುವ ಇಚ್ಛೆಯೇನೂ ಇಲ್ಲವಂತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry