ಅಮೂಲ್ಯ ಮತವನ್ನು ಮಾರಿಕೊಳ್ಳಬೇಡಿ

7

ಅಮೂಲ್ಯ ಮತವನ್ನು ಮಾರಿಕೊಳ್ಳಬೇಡಿ

Published:
Updated:

ಯಲಹಂಕ: `ಮತದಾರರು ತಮ್ಮ ಮತವನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು~ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಮನವಿ ಮಾಡಿದರು.ಬಹುಜನ ಸಮಾಜ ಪಕ್ಷದ ಯಲಹಂಕ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕಗಳ ವತಿಯಿಂದ ಹೆಸರಘಟ್ಟ ರಸ್ತೆಯ ಲಕ್ಷ್ಮೀಪುರ ಕ್ರಾಸ್ ಬಳಿ ಹಮ್ಮಿಕೊಂಡಿದ್ದ ಭಗವಾನ್ ಬುದ್ಧರ 2550ನೇ ಜಯಂತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೇ ಜಯಂತಿ ಹಾಗೂ `ಓಟಿನ ಮಹತ್ವ ತಿಳಿಸೋಣ-ಪ್ರಜಾಪ್ರಭುತ್ವ ಉಳಿಸೋಣ~ ಜನಾಂದೋಲನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.`ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏಪ್ರಿಲ್ 14ರಿಂದ ಜೂನ್ 4ರವರೆಗೆ ರಾಜ್ಯಾದ್ಯಂತ ಈ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ~ ಎಂದು ಅವರು ಹೇಳಿದರು.`ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ ಮತ್ತಿತರ ಅಮಾನುಷ ಕೃತ್ಯಗಳು ಪ್ರತಿನಿತ್ಯ ನಡೆಯುತ್ತಲೇ ಇವೆ.ಇದರ ಜೊತೆಗೆ ಕೇಂದ್ರ ಸರ್ಕಾರ ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ಪರಿಣಾಮ ಮಧ್ಯಮವರ್ಗದ ಜನ ಸಮುದಾಯದ ಜೀವನ ಕಷ್ಟಕರವಾಗಿ ಜೀವನ ನಿರ್ವಹಣೆಗೆ ಬ್ಯಾಂಕುಗಳಲ್ಲಿ ಪಡೆದಿರುವ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ~ ಎಂದು ಅವರು ವಿಷಾದ  ವ್ಯಕ್ತಪಡಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿಗಣಿ ಶಂಕರ್, ಕಮಲನಾಭನ್ ಮಾತನಾಡಿದರು.

ರಾಜ್ಯ ಕಾರ್ಯದರ್ಶಿ ಪುರುಷೋತ್ತಮ್, ಜಿಲ್ಲಾ ಸಂಯೋಜಕ ಈರಣ್ಣ ಮೌರ್ಯ, ಜಿಲ್ಲಾಧ್ಯಕ್ಷ ಎಂ.ಉದಯಕುಮಾರ್, ದಾಸರಹಳ್ಳಿ ಘಟಕದ ಅಧ್ಯಕ್ಷ ರಮೇಶ್‌ಕುಮಾರ್, ಮುಖಂಡರಾದ ಕೃಷ್ಣಪ್ಪ, ಓಂಕಾರಪ್ಪ ಮೊದಲಾ ದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry