ಶುಕ್ರವಾರ, ಜೂನ್ 18, 2021
28 °C
ರಾಷ್ಟ್ರೀಯ ಸ್ವಯಂಸೇವಕ ಸಂಘ ಆರೋಪ

ಅಮೃತಾನಂದಮಯಿ ಮಠದ ವಿರುದ್ಧ ಷಡ್ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾತಾ ಅಮೃತಾನಂದ­ಮಯಿ ಅವರ ಮಠದಲ್ಲಿ ಲೈಂಗಿಕ ಶೋಷಣೆ ನಡೆಯುತ್ತಿದೆ ಎಂದು ಮಹಿಳೆ­ಯೊಬ್ಬರು ಪುಸ್ತಕ ಪ್ರಕಟಿಸಿರುವುದರ ಹಿಂದೆ ಪಾಶ್ಚಿಮಾತ್ಯ ದುಷ್ಟ ಶಕ್ತಿಗಳ ಕೈವಾಡವಿದೆ ಎಂದು ಆರ್‌ಎಸ್‌ಎಸ್‌ ಆರೋಪಿಸಿದೆ.‘ಅಮೃತಾನಂದಮಯಿ ಅವರು ದೇಶದ ಪ್ರಮುಖ ಧಾರ್ಮಿಕ ಮುಖಂಡ­ರಲ್ಲಿ ಒಬ್ಬರಾಗಿದ್ದಾರೆ. ಅವರು ಹಲವು ರಾಷ್ಟ್ರಗಳಲ್ಲಿ ಧರ್ಮ ಪ್ರಚಾರ ಮಾಡು­ತ್ತಿ­ದ್ದಾರೆ. ಅವರ ಏಳ್ಗೆಯನ್ನು ಸಹಿಸದ ಪಾಶ್ಚಿಮಾತ್ಯ ದುಷ್ಟಶಕ್ತಿಗಳು ತೇಜೋ­ವಧೆ ಮಾಡಲು ಇಂತಹ ಷಡ್ಯಂತ್ರ ರೂಪಿಸಿವೆ’ ಎಂದು ಆರ್‌ಎಸ್‌­ಎಸ್‌ನ ಅಖಿಲ ಭಾರತ ಪ್ರಧಾನ ಕಾರ್ಯ­ದರ್ಶಿ ಸುರೇಶ್‌ ಜೋಷಿ ಪತ್ರಿಕಾ ಹೇಳಿಕೆಯಲ್ಲಿ ಆರೋಪಿ­ಸಿದ್ದಾರೆ. ಭಾನುವಾರ ಪತ್ರಿಕಾ­ಗೋಷ್ಠಿ­ಯಲ್ಲೇ ಅವರು ಈ ಹೇಳಿಕೆ ಬಿಡುಗಡೆ ಮಾಡಿದರು.ಅಮೃತಾನಂದಮಯಿ ಅವರ ಮಠದ ವಿರುದ್ಧ ಕೃತಿಯ ಲೇಖಕಿಯು ಮಾಡಿರುವ ಆರೋಪಗಳಲ್ಲಿ ಹುರು­ಳಿಲ್ಲ. ಮಠದ ಗೌರವಕ್ಕೆ ಚ್ಯುತಿ ತರುವ ಉದ್ದೇಶದಿಂದ ಈ ಕೃತಿ ರಚಿಸಲಾಗಿದೆ. ಈ ರೀತಿ ಮಾಡು­ವವರನ್ನು ವೈರಿಗಳು ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಸಲಿಂಗಕಾಮ ಮಾನ್ಯತೆಗೆ ವಿರೋಧ: ಸಲಿಂಗ ಕಾಮವನ್ನು ಮಾನ್ಯ­ಮಾಡುವ ನಿಟ್ಟಿನಲ್ಲಿ ಕಾನೂನು ರೂಪಿ­ಸುವ ಕೇಂದ್ರ ಸರ್ಕಾರದ ನಿಲುವನ್ನು ತೀವ್ರವಾಗಿ ವಿರೋಧಿಸಿದ ಅವರು, ‘ವಿವಾಹಪೂರ್ವ ಲೈಂಗಿಕತೆ, ಮದುವೆ­ಯಾಗದೇ ಸಹ­ಜೀವನ ನಡೆಸುವುದು, ಸಲಿಂಗ ಕಾಮ ಇವೆಲ್ಲವೂ ಭಾರತೀಯ ಸಮಾಜದಲ್ಲಿ ಒಪ್ಪಿತವಲ್ಲ. ಕಾನೂನಿನ ಮೂಲಕ ಅದನ್ನು ಜನರ ಮೇಲೆ ಹೇರಬಾರದು. ಈ ಬಗ್ಗೆ ಚರ್ಚೆ ನಡೆಯಬೇಕು. ನಂತರ ತೀರ್ಮಾನಕ್ಕೆ ಬರಬೇಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.