ಅಮೃತಾ ಜತೆ ಡೇಟ್!

7

ಅಮೃತಾ ಜತೆ ಡೇಟ್!

Published:
Updated:

ರಿಡಿಫ್ ಡಾಟ್ ಕಾಮ್‌ನ  ಡೈಲಿ ಡೀಲ್ಸ್ ಸೇವೆಯಾದ `ರಿಡಿಫ್ ಡೀಲ್ ಹೋ ಜಾಯೆ~ ತನ್ನ ಆನ್‌ಲೈನ್ ಶಾಪರ್‌ಗಳಿಗೆ ವ್ಯಾಲೆಂಟೈನ್ ದಿನದಂದು ಬಾಲಿವುಡ್ ನಟಿ ಅಮೃತಾರಾವ್ ಅವರೊಂದಿಗೆ ಒಂದು ದಿನ ಕಾಲ ಕಳೆಯುವ ಅಪೂರ್ವ ಅವಕಾಶ ನೀಡಿತ್ತು.ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆರಿಸಲಾಯಿತು. ಆರು ಅದಷ್ಟಶಾಲಿಗಳನ್ನು ಮೆಟ್ರೊ ನಗರಗಳಾದ ಮುಂಬಯಿ, ಪುಣೆ, ದೆಹಲಿ, ಹೈದರಾಬಾದ್, ಕೊಲ್ಕತ್ತಾ, ಬೆಂಗಳೂರು ಮತ್ತು ಚೆನ್ನೈಗಳಿಂದ ಆರಿಸಲಾಯಿತು. ವಿಜೇತರನ್ನು ನಟಿ ಅಮೃತಾರಾವ್ ಅವರೊಂದಿಗೆ ಮುಂಬಯಿನ ಸಾಗರದಲ್ಲಿ ವಿಲಾಸಿ ಯಾಕ್ಟ್ ಮೂಲಕ ವಿಹರಿಸಲು ಕಳುಹಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಮೃತಾರಾವ್ ಅವರು ವಿಶೇಷವಾದ ಮನಾಲಿ ಜೆಗ್‌ಟಾಪ್ ಅವರು ವಿನ್ಯಾಸಗೊಳಿಸಿದ್ದ ಉಡುಪನ್ನು ಧರಿಸಿದ್ದರು. `ರಿಡಿಫ್ ಡೀಲ್ ಹೋ ಜಾಯೆ~ ಜತೆಗಿನ ಈ ವ್ಯಾಲೆಂಟೈನ್ ದಿನ ನನ್ನ ನೆನಪಿನಲ್ಲಿಡುವಂತಹದ್ದು. ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ನನ್ನ ಎಲ್ಲಾ ಅಭಿಮಾನಿಗಳು ಮತ್ತು ಶಾಪರ್‌ಗಳಿಗೆ ಧನ್ಯವಾದಗಳು ಎಂದರು.ರಿಡಿಫ್ ಡಾಟ್ ಕಾಮ್ ಉಪಾಧ್ಯಕ್ಷ ಹರ್ಷದ್ ಹರ್ಡಿಕರ್ `ಅಮೃತಾರಾವ್ ಅವರಿಗೆ ಹಾಗೂ ನಮ್ಮ ಆನ್‌ಲೈನ್ ಶಾಪರ್‌ಗಳಿಗೆ ಈ ವ್ಯಾಲೆಂಟೈನ್ ಉಪಕ್ರಮದ ಭಾಗವಾಗಿ ಇದ್ದುದಕ್ಕೆ ನಾವು ವಂದನೆಗಳನ್ನು ಅರ್ಪಿಸುತ್ತೇವೆ. ರಿಡಿಫ್ ಡೀಲ್ ಹೋ ಜಾಯೆ ಇಂತಹ ನವೀನ ಉಪಕ್ರಮಗಳನ್ನು ಮುಂದೆಯೂ ಸಂಘಟಿಸಿ ನಮ್ಮ ಗ್ರಾಹಕರಿಗೆ ಅದ್ಭುತ ಮೌಲ್ಯ ನೀಡಲಿದೆ ಎಂದು ಹೇಳಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry