ಅಮೃತ ಮಹೋತ್ಸವ: 75 ಹಿರಿಯರಿಗೆ ಸನ್ಮಾನ

7

ಅಮೃತ ಮಹೋತ್ಸವ: 75 ಹಿರಿಯರಿಗೆ ಸನ್ಮಾನ

Published:
Updated:

ಕೆ.ಆರ್.ನಗರ: `ಪಟ್ಟಣದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕಿನ 75 ಹಿರಿಯ ನಾಗರಿಕರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ~ ಎಂದು ಪುರಸಭೆ ಅಧ್ಯಕ್ಷ ತಮ್ಮನಾಯಕ ಹೇಳಿದರು.ಪಟ್ಟಣದ ರೇಡಿಯೋ ಮೈದಾನದಲ್ಲಿ ಪುರಸಭೆ ಮತ್ತು ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ವತಿಯಿಂದ ಪಟ್ಟಣದ ಅಮೃತ ಮಹೋತ್ಸವ ಪ್ರಯುಕ್ತ ಈಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸುವಂತಾಗಬೇಕು ಎಂದರು.ರಾಮನಗರ ಅಮರಜ್ಯೋತಿ ಕಲಾ ಬಳಗದ ವತಿಯಿಂದ ಅಭಿನಯಿಸಿದ `ಶ್ರೀಕೃಷ್ಣ ಸಂಧಾನ~ ಪ್ರಥಮ, (ರೂ.25 ಸಾವಿರ), ಹಾಸನ ಕಲಾಸಿರಿ ನಾಟಕ ಶಾಲೆ ಕಲಾವಿದರು ಅಭಿನಯಿಸಿದ `ಒಂದು ಬೊಗಸೆ ನೀರು~ ದ್ವಿತೀಯ (ರೂ.15 ಸಾವಿರ), ಮದ್ದೂರು ರಂಗ ಭೂಮಿ ಸಂಘದ ಕಲಾವಿದರು ಅಭಿನಯಿಸಿದ `ಕುರಿದೊಡ್ಡಿ ಕುರುಕ್ಷೇತ್ರ~ ತೃತೀಯ (ರೂ.10 ಸಾವಿರ) ಮತ್ತು ಮೈಸೂರು ದಿವ್ಯಶ್ರೀ ಕಲಾ ಸಂಘದ ಕಲಾವಿದರು ಅಭಿನಯಿಸಿದ `ಛತ್ರಪತಿ ಶಿವಾಜಿ~ ಸಮಾಧಾನಕರ (ರೂ.3 ಸಾವಿರ) ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಪಟ್ಟಣದ ಶಾಲಾ ಮಕ್ಕಳಿಗಾಗಿ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ರವಿಶಂಕರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಯೋಗಾನಂದ, ಮೂಳೆ ತಜ್ಞ ಮೆಹಬೂಬ್ ಖಾನ್, ಮುಖ್ಯಾಧಿಕಾರಿ ನಾಗಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿಂಡಿಮ ಶಂಕರ್, ಬಳಗದ ಅಧ್ಯಕ್ಷ ರಾ.ಸುರೇಶ್, ರಿಜ್ವಾನ್, ಎ.ಸಿ.ಸುರೇಶ್, ಶಿವಕುಮಾರ್, ತಿಮ್ಮಶೆಟ್ಟಿ, ರಂಗ ಕಲಾವಿದ ಕುಮಾರ್ ಹರ್ಷೇಗೌಡ, ಶಾವಂದಪ್ಪ, ಅಸ್ಲಂ, ಜವರೇಗೌಡ, ಶೇಷಣ್ಣ, ಕುಪ್ಪೆ ಮೋಹನಕುಮಾರ್, ಉಮೇಶ್, ಹೊನ್ನಾಚಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry