ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ ರವಾನೆ

7
ಸಿರಿಯಾ ವಿರುದ್ಧ ಏಕಪಕ್ಷೀಯ ದಾಳಿ

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ ರವಾನೆ

Published:
Updated:

ವಾಷಿಂಗ್ಟನ್‌ (ಪಿಟಿಐ): ಸಿರಿಯಾ ವಿರುದ್ಧ ಯಾವುದೇ ರೀತಿಯ ಏಕಪಕ್ಷೀಯ ಸೇನಾ ದಾಳಿ ಕೈಗೊಳ್ಳುವ ಅಮೆರಿಕ ಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಷ್ಯಾ, ಇದು ಮತ್ತೊಂದು ರೀತಿಯ ಭಯೋತ್ಪಾದನೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.ಅಮೆರಿಕ ನಡೆಸಬಹುದಾದ ದಾಳಿಯಿಂದಾಗಿ ಸಿರಿಯಾ ಗಡಿಯಾಚೆಗೂ ಮತ್ತಷ್ಟು ಬಿಕ್ಕಟ್ಟು ತಲೆದೋರುವುದಲ್ಲದೆ ವಿಶ್ವಸಂಸ್ಥೆಯ ಆಶಯಗಳಿಗೆ ವಿರುದ್ಧ ಕ್ರಮ ಎನಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.ಸಿರಿಯಾ ವಿರುದ್ಧ ದಾಳಿ ನಡೆಸುವ ಅಮೆರಿಕ ಯತ್ನವನ್ನು ಹಲವು ರಾಷ್ಟ್ರಗಳು ಹಾಗೂ ಪೋಪ್‌ ಒಳಗೊಂಡಂತೆ ಧಾರ್ಮಿಕ ನಾಯಕರು ಪ್ರಬಲವಾಗಿ ವಿರೋಧಿಸಿದ್ದು, ಇದರಿಂದ ಅಮಾಯಕರು ಬಲಿಪಶುಗಳಾಗುತಾ್ತರೆ ಎಂದು ಪುಟಿನ್‌ ‘ನೂ್ಯಯಾರ್ಕ್ ಟೈಮ್ಸ್’ ಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.‘ಸೇನಾ ದಾಳಿಯಿಂದ ಹಿಂಸಾಚಾರ ಮತ್ತಷ್ಟು ಹೆಚ್ಚುವುದಲ್ಲದೆ ಹೊಸ ಬಗೆಯ ಭಯೋ­ತ್ಪಾದನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇಂತಹ ಕ್ರಮ ಅಂತಾರಾಷ್ಟ್ರೀಯ ಕಾನೂನಿಗೂ ವಿರುದ್ಧ’ ಎಂದು ಪುಟಿನ್‌ ತಿಳಿಸಿದ್ದಾರೆ.ರಷ್ಯಾ ಮುಂದಿಟ್ಟ ನಾಲ್ಕು ಹಂತದ  ಸೂತ್ರ; ಮಾಸ್ಕೊ ವರದಿ(ಎಎಫ್‌ಪಿ): ಸಿರಿಯಾ ತನ್ನಲ್ಲಿರುವ ರಾಸಾಯನಿಕ ಅಸ್ತ್ರಗಳನ್ನು ಅಂತರ­ರಾಷ್ಟ್ರೀಯ ಸಮುದಾಯದ ನಿಯಂತ್ರಣಕ್ಕೆ ಒಪ್ಪಿಸುವ ದಿಸೆಯಲ್ಲಿ ನಾಲ್ಕು ಹಂತದ ಸೂತ್ರ­ವೊಂದನ್ನು ರಷ್ಯಾ ಅಮೆರಿಕದ ಮುಂದಿಟ್ಟಿದೆ.ಪರಿಹಾರ ಸೂತ್ರದ ಮೊದಲ ಹಂತವಾಗಿ ರಾಸಾಯನಿಕ ಅಸ್ತ್ರಗಳ ನಿಷೇಧ ಸಂಘಟನೆ (ಒಪಿಸಿಡಬ್ಲ್ಯೂ)ಗೆ ಡಮಾಸ್ಕಸ್‌ ಸೇರಬೇಕಾ­ಗುತ್ತದೆ ಎಂದು ರಷ್ಯಾ ರಾಜತಾಂತ್ರಿಕ ಮೂಲ­ಗಳನು್ನ ಉಲ್ಲೇಖಿಸಿ ’ಕೋಮರ್‌ಸಂಟ್‌’ ದೈನಿಕ ವರದಿ ಮಾಡಿದೆ.ಇದಾದ ನಂತರ ರಾಸಾಯನಿಕ ಅಸ್ತ್ರಗಳನ್ನು ಇಡಲಾದ ಸ್ಥಳ ಹಾಗೂ ಅವುಗಳನ್ನು ಎಲ್ಲಿ ತಯಾರಿಸಲಾಗಿದೆ ಎನ್ನುವ ಮಾಹಿತಿಯನ್ನು ಸಿರಿಯಾ ನೀಡಬೇಕಾಗುತ್ತದೆ. ಮೂರನೇ ಹಂತವಾಗಿ ಇಂತಹ ಅಸ್ತ್ರಗಳ ಕುರಿತು ಪರಿಶೀಲನೆ ನಡೆಸಲು ಒಪಿಸಿಡಬೂ್ಲ್ಯಗೆ ಅನುಮತಿ ನೀಡ­ಬೇಕಾಗುತ್ತದೆ. ಅಸ್ತ್ರಗಳು ಇದ್ದಲ್ಲಿ ಅವುಗಳನ್ನು ಹೇಗೆ ನಾಶಪಡಿಸಬೇಕು ಎನು್ನವುದರ ಕುರಿತು ತನಿಖಾಧಿಕಾರಿಗಳ ಜತೆ ಸಹಕಾರ ನೀಡುವುದು ನಾಲ್ಕನೆಯ ಹಂತವಾಗಿದೆ ಎಂದು ತಿಳಿಸಲಾಗಿದೆ.ಇಂತಹ ಪ್ರಸ್ತಾವನೆಯನ್ನು ರಷ್ಯಾ ಈಗಾಗಲೇ ಅಮೆರಿಕಕ್ಕೆ ನೀಡಿದ್ದು, ಈ ಸಂಬಂಧ ಸಮಾಲೋಚನೆ ನಡೆಸಲು ಅಮೆರಿಕ ಬಯಸಿದೆ ಎಂದು ವರದಿ ತಿಳಿಸಿದೆ.ಸಿರಿಯಾ ಬಿಕ್ಕಟ್ಟು ನಿವಾರಣೆಗೆ ಮಾತುಕತೆ (ಮಾಸ್ಕೊ/ಜಿನಿವಾ ವರದಿ): ಸಿರಿಯಾ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ರಷ್ಯಾ ಸೂಚಿಸಿರುವ ನಾಲ್ಕು ಹಂತಗಳ ಮಾರ್ಗೋ­ಪಾಯ ಕುರಿತಂತೆ ಚರ್ಚಿಸಲು ಅಮೆರಿಕ ಮತ್ತು ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳು ಚರ್ಚೆ ಆರಂಭಿಸಿದ್ದಾರೆ.ಸಿರಿಯಾ ಸರ್ಕಾರದ ಬಳಿ ಇರುವ ರಾಸಾಯನಿಕ ಅಸ್ತ್ರಗಳನ್ನು ಅಂತರ­ರಾಷ್ಟ್ರೀಯ ನಿಯಂತ್ರಣಕ್ಕೆ ಒಪ್ಪಿಸುವ ಕುರಿತಂತೆ ರಷ್ಯಾ ನಾಲ್ಕು ಹಂತದ ಪರಿಹಾರ ಸೂತ್ರ ಸೂಚಿಸಿದ್ದು, ಈ ಬಗ್ಗೆ ಚರ್ಚೆ ಆರಂಭವಾಗಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್‌ಕೆರಿ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾರೋವ್‌ನಡುವೆ ಮಾತುಕತೆ ನಡೆದಿದೆ.ಸಿರಿಯಾ: ವಿಶ್ವಸಂಸ್ಥೆ ತನಿಖಾ ವರದಿ ಸೋಮವಾರ ಪ್ರಕಟ ?

ಪ್ಯಾರಿಸ್ (ಎಎಫ್‌ಪಿ): ಬಂಡುಕೋರರನ್ನು ಸದೆಬಡಿಯಲು ಸಿರಿಯಾ ರಾಸಾಯನಿಕ ಅಸ್ತ್ರ ಪ್ರಯೋಗ ಮಾಡಿರುವ ಕುರಿತು ತನಿಖೆ ಕೈಗೊಂಡಿರುವ ವಿಶ್ವಸಂಸೆ್ಥ ತನ್ನ ವರದಿಯನು್ನ  ಸೋಮವಾರ ಪ್ರಕಟಿಸುವ ನಿರೀಕ್ಷೆ ಇದೆ.‘ಸಿರಿಯಾ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿರುವ ಎಲ್ಲ ಸಾಧ್ಯತೆಗಳು ತೋರುತ್ತಿವೆ, ರಾಸಾಯನಿಕ ಹತ್ಯಾಕಾಂಡ ನಡೆದಿರುವುದನ್ನು ವರದಿ ದೃಢಪಡಿಸುವ ನಿರೀಕ್ಷೆ ಇದೆ’ ಎಂದು ಫಾ್ರನ್‌್ಸ ವಿದೇಶಾಂಗ ಸಚಿವ ಲಾರೆಂಟ್‌ ಫೆಬಿಯಸ್‌ ತಿಳಿಸಿದರು.ಪ್ಯಾರಿಸ್ ರೇಡಿಯೊ ಜತೆ ಮಾತನಾಡಿದ ಫೆಬಿಯಸ್‌,  ಆಗಸ್ಟ್ 21ರಂದು ಡಮಾಸ್ಕಸ್‌ನಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಮಾದರಿಗಳನು್ನ ಸಂಗ್ರಹಿಸಿದ ವಿಶ್ವಸಂಸ್ಥೆ ತನಿಖಾ ತಂಡದ ಸದಸ್ಯರು ಆಗಸ್ಟ್ 31ರಂದು ಸಿರಿಯಾಕೆ್ಕ ತೆರಳಿದು್ದ ತನಿಖೆ ಕೈಗೊಂಡಿದಾ್ದರೆ ಎಂದು ತಿಳಿಸಿದರು.ದಾಳಿಗೆ ಸಿರಿಯಾ ಆಡಳಿತವೇ ಹೊಣೆ ಎಂದು ಪ್ರತಿಪಾದಿಸುತಿ್ತರುವ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಈ ಸಂಬಂಧ ಸಮಗ್ರ ತನಿಖೆಗೆ ವಿಶ್ವಸಂಸ್ಥೆ ಮೇಲೆ ಒತ್ತಡ ತಂದಿದ್ದವು. ಆದರೆ ಈ ವಾದ ಒಪ್ಪದ ಸಿರಿಯಾ ಹಾಗೂ ಮಿತ್ರ ರಾಷ್ಟ್ರ ರಷಾ್ಯ, ಬಂಡುಕೋರರೇ ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದವು.ಬಂಡುಕೋರರೇ ದಾಳಿ ನಡೆಸಿದಾ್ದರೆ ಎನು್ನವ ರಷ್ಯಾ ಅಧ್ಯಕ್ಷ ವ್ಲಡಿಮಿರ್‌ ಪುಟಿನ್‌ ಅವರ ಹೇಳಿಕೆಗೆ ಪ್ರತಿಕಿ್ರಯಿಸಿದ ಫೆಬಿಯಸ್‌, ’ಅದೆಲ್ಲ ಸುಳ್ಳು, ರಷಿಯನ್ನರು ಈ ರೀತಿ ಹೇಳುವ ಮೂಲಕ ಆಟ ಆಡುತ್ತಿದ್ದಾರೆ’ ಎಂದು ಟೀಕಿಸಿದರು.ಸಿರಿಯಾ ಮೇಲೆ ದಾಳಿಗೆ ಅಮೆರಿಕ ನೌಕಾದಳ ಸನ್ನದ್ಧ

ವಾಷಿಂಗ್ಟನ್‌ (ಪಿಟಿಐ):  ’ಅಧ್ಯಕ್ಷ ಬರಾಕ್‌ ಒಬಾಮ ಆದೇಶ ನೀಡುವುದಷ್ಟೆ ತಡ ಸಿರಿಯಾ ಮೇಲೆ ತೀವ್ರ ದಾಳಿ ನಡೆಸಲು ನಾವು ಸನ್ನದ್ಧರಾಗಿದ್ದೇವೆ’ ಎಂದು ಅಮೆರಿಕದ ನೌಕಾದಳದ ಕಾರ್ಯದರ್ಶಿ ರೇ ಮೆಬಸ್‌ ತಿಳಿಸಿದ್ದಾರೆ.

ರಾಸಾಯನಿಕ ಅಸ್ತ್ರ ಪ್ರಯೋಗ ಮಾಡಿದ ಸಿರಿಯಾದ ಮೇಲೆ ಸೀಮಿತ ಸೇನಾ ದಾಳಿ ಕೈಗೊಳ್ಳಲು ಬೆಂಬಲ ಕೋರಿ ರಾಷ್ಟ್ರವನು್ನ ಉದೇ್ದಶಿಸಿ ಅಧ್ಯಕ್ಷ ಒಬಾಮ ಮಾಡಿರುವ ಭಾಷಣದ ಹಿನ್ನಲೆಯಲ್ಲಿ ಮೆಬಸ್‌ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.ಬಂಡುಕೋರರಿಗೆ ಶಸ್ತಾಸ್ತ್ರ: ಈ ನಡುವೆ ಸಿರಿಯಾ ಆಡಳಿತದ ವಿರುದ್ಧ ಹೋರಾಡು­ತ್ತಿರುವ ಬಂಡುಕೋರರಿಗೆಶಸ್ತಾಸ್ತ್ರಗಳನ್ನು ಒದಗಿಸುವ ಪ್ರಕ್ರಿಯೆಗೆಅಮೆರಿಕ ಚಾಲನೆ ನೀಡಿದೆ.ಬಂಡುಕೋರರಿಗೆ ಅಗತ್ಯವಾದ ಲಘುಶಸ್ತಾಸ್ತ್ರ, ವಾಹನಗಳನ್ನು ಹಾಗೂ ವೈದ್ಯ­ಕೀಯ ಕಿಟ್‌ಗಳನ್ನು ಅಮೆರಿಕದ ವಿದೇಶಾಂಗ ಸಚಿವಾಲಯ ಒದಗಿಸುತ್ತಿದೆ ಎಂದು ‘ವಾಷಿಂಗ್ಟನ್‌ ಪೋಸ್ಟ್’ ವರದಿಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry