ಗುರುವಾರ , ಫೆಬ್ರವರಿ 25, 2021
29 °C
ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ಎರಡು ಗಂಟೆ ವಿಚಾರಣೆ

ಅಮೆರಿಕದಲ್ಲಿ ಮತ್ತೆ ಶಾರುಕ್‌ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದಲ್ಲಿ ಮತ್ತೆ ಶಾರುಕ್‌ ತಪಾಸಣೆ

ಲಾಸ್‌ ಏಂಜಲೀಸ್‌ (ಪಿಟಿಐ): ಬಾಲಿವುಡ್‌ ತಾರೆ ಶಾರುಕ್‌ ಖಾನ್‌ ಅವರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದು ಸುಮಾರು ಎರಡು ತಾಸು ತಪಾಸಣೆಗೆ ಒಳಪಡಿಸಿದ್ದಾರೆ.ಕಳೆದ ಏಳು ವರ್ಷಗಳ ಅವಧಿಯಲ್ಲಿ ಶಾರುಕ್‌ ಅವರನ್ನು ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿರುವುದು ಇದು ಮೂರನೇ ಬಾರಿ. ಈ ಬಗ್ಗೆ ಶಾರುಕ್‌ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಖಾನ್‌ ಅವರು ವಿಮಾನ ನಿಲ್ದಾಣದಲ್ಲಿ ಎದುರಿಸಿದ ತೊಂದರೆಗೆ ಕ್ಷಮೆ ಯಾಚಿಸುವುದಾಗಿ ಅಮೆರಿಕ ವಿದೇಶಾಂಗ ಸಚಿವಾಲಯದ ಸಹಾಯಕ ಕಾರ್ಯದರ್ಶಿ ನಿಷಾ ದೇಸಾಯಿ ಬಿಸ್ವಾಲ್‌ ಟ್ವೀಟ್‌ ಮಾಡಿದ್ದಾರೆ. ಆದರೆ ಇದು ತಮ್ಮ ಖಾಸಗಿ ಟ್ವೀಟ್‌ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ರಿಚರ್ಡ್‌ ವರ್ಮಾ ಅವರೂ ಶಾರುಕ್‌ ಕ್ಷಮೆ ಯಾಚಿಸಿದ್ದು, ಮತ್ತೊಮ್ಮೆ ಹೀಗಾಗದಂತೆ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ವರ್ಮಾ ಅವರು ವ್ಯಕ್ತಪಡಿಸಿದ ಕಾಳಜಿಗೆ ಶಾರುಕ್‌ ಧನ್ಯವಾದ ಹೇಳಿದ್ದಾರೆ.ಶಾರುಕ್‌ ಅವರನ್ನು ವಲಸೆ ಅಧಿಕಾರಿಗಳು ವಿಶೇಷ ತಪಾಸಣೆಗೆ ಒಳಪಡಿಸುವುದು ಇದೇ ಮೊದಲೇನಲ್ಲ. 2012ರ ಏಪ್ರಿಲ್‌ನಲ್ಲಿ ನ್ಯೂಯಾರ್ಕ್‌ ಸಮೀಪದ ವೈಟ್‌ ಪ್ಲೈನ್ಸ್‌ ವಿಮಾನ ನಿಲ್ದಾಣದಲ್ಲಿ ಶಾರುಕ್‌ ಅವರನ್ನು ವಲಸೆ ಅಧಿಕಾರಿಗಳು ವಶಕ್ಕೆ ಪಡೆದು ಸುಮಾರು ಎರಡು ತಾಸು ತಪಾಸಣೆಗೆ ಒಳಪಡಿಸಿದ್ದರು.ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಹೆಂಡತಿ ನೀತಾ ಅಂಬಾನಿ ಅವರ ಜತೆ ಯೇಲ್‌ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾರುಕ್‌ ಅಮೆರಿಕಕ್ಕೆ ಹೋಗಿದ್ದರು.ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಶಾರುಕ್‌ ಅವರನ್ನು ತಪಾಸಣೆಗಾಗಿ ನಿಲ್ಲಿಸಲಾಗಿತ್ತು. ನೀತಾ ಮತ್ತು ಇತರರಿಗೆ ಮುಂದಕ್ಕೆ ಸಾಗಲು ಅನುಮತಿ ನೀಡಲಾಗಿತ್ತು. ವಲಸೆ ವಿಭಾಗ ಮತ್ತು ಆಂತರಿಕ ಭದ್ರತೆ ಅಧಿಕಾರಿಗಳ ಜತೆ ಯೇಲ್‌ ವಿಶ್ವವಿದ್ಯಾಲಯದ ಅಧಿಕಾರಿಗಳು ಮಾತುಕತೆ ನಡೆಸಿದ ನಂತರವಷ್ಟೇ ಶಾರುಕ್‌ ಅವರನ್ನು ಬಿಡುಗಡೆ ಮಾಡಲಾಗಿತ್ತು.2009ರಲ್ಲಿ, ನ್ಯೂಜೆರ್ಸಿಯ ನೆವಾರ್ಕ್‌ ವಿಮಾನ ನಿಲ್ದಾಣದಲ್ಲಿ ಶಾರುಕ್‌ ಅವರನ್ನು ವಶಕ್ಕೆ ಪಡೆದು ವಲಸೆ ಅಧಿಕಾರಿಗಳು ಸುಮಾರು ಎರಡು ತಾಸು ತಪಾಸಣೆಗೆ ಒಳಪಡಿಸಿದ್ದರು.ಅಮ್ಜದ್ ಅಲಿ ಖಾನ್‌ಗೆ ವೀಸಾ ನಿರಾಕರಣೆ

ನವದೆಹಲಿ: ಲಂಡನ್‌ಗೆ ಭೇಟಿ ನೀಡಲು ಸರೋದ್‌ ವಾದಕ ಅಮ್ಜದ್ ಅಲಿ ಖಾನ್ ಸಲ್ಲಿಸಿದ್ದ ವೀಸಾ ಅರ್ಜಿಯನ್ನು ಬ್ರಿಟನ್ ಸರ್ಕಾರ ತಿರಸ್ಕರಿಸಿದೆ. ಅರ್ಜಿ ತಿರಸ್ಕಾರ ಆಗಿರುವ ಬಗ್ಗೆ ಖಾನ್ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘ವೀಸಾ ಅರ್ಜಿ ತಿರಸ್ಕೃತಗೊಂಡಿದೆ. ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರುವ ಕಲಾವಿದರಿಗೆ ಇದು ಬೇಸರದ ಸಂಗತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಖಾನ್ ಅವರು ಮುಂದಿನ ತಿಂಗಳು ಲಂಡನ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಬೇಕಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.