ಅಮೆರಿಕದಲ್ಲಿ ರವಿಶಂಕರ್‌ಗೆ ಶ್ರದ್ಧಾಂಜಲಿ

7

ಅಮೆರಿಕದಲ್ಲಿ ರವಿಶಂಕರ್‌ಗೆ ಶ್ರದ್ಧಾಂಜಲಿ

Published:
Updated:

ಲಾಸ್ ಏಂಜಲೀಸ್ (ಪಿಟಿಐ): ಇತ್ತೀಚೆಗೆ ಅಗಲಿದ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಸ್ಮರಣಾರ್ಥ ಕ್ಯಾಲಿಫೋರ್ನಿಯಾದ ಅವರ ಮನೆಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.ಖ್ಯಾತ ರಾಕ್‌ಸ್ಟಾರ್ ದಿ.ಜಾರ್ಜ್ ಹ್ಯಾರಿಸನ್ ಅವರ ಪತ್ನಿ ಒಲಿವಿಯಾ ಅವರೂ ಪಾಲ್ಗೊಂಡು ರವಿಶಂಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಹ ಸಂಗೀತಗಾರರ ಸಂತಾಪ ಸಂದೇಶವನ್ನು ಓದಲಾಯಿತು. ಬಾಂಗ್ಲಾದೇಶದಲ್ಲಿ 1971ರಲ್ಲಿ ತಮ್ಮ ಪತಿ ಹ್ಯಾರಿಸನ್ ಹಾಗೂ ರವಿಶಂಕರ್ ಜೊತೆಗೂಡಿ ನಡೆಸಿದ ಕಛೇರಿಯನ್ನು ಒಲಿವಿಯಾ ಸ್ಮರಿಸಿದರು. ರವಿಶಂಕರ್ ಪುತ್ರಿ ಅನುಷ್ಕಾ ಶಂಕರ್ ಹಾಗೂ ಅವರ ಮಲ ಸಹೋದರಿ ನೋರಾ ಜೋನ್ಸ್ ಕೂಡ  ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry