ಅಮೆರಿಕದ ಅರ್ಥ ವ್ಯವಸ್ಥೆ ಚೇತರಿಕೆ

7

ಅಮೆರಿಕದ ಅರ್ಥ ವ್ಯವಸ್ಥೆ ಚೇತರಿಕೆ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಗ್ರಾಹಕರ ವೆಚ್ಚದಲ್ಲಿನ ಏರಿಕೆ ಕಾರಣಕ್ಕೆ ಅಮೆರಿಕದ ಆರ್ಥಿಕ ವೃದ್ಧಿ ದರವು ಮೂರನೇ ತ್ರೈಮಾಸಿಕದಲ್ಲಿ ಶೇ 2.5ರಷ್ಟು ವೃದ್ಧಿಯಾಗಿದೆ.ಮೊದಲ ತ್ರೈಮಾಸಿಕದ ಶೇ 0.4 ಮತ್ತು ದ್ವಿತೀಯ ತ್ರೈಮಾಸಿಕದ ಶೇ 1.3ರಷ್ಟು ವೃದ್ಧಿ ದರಕ್ಕೆ ಹೋಲಿಸಿದರೆ ಇದು ಗಮನಾರ್ಹ ಏರಿಕೆಯಾಗಿದೆ.ಒಬಾಮ ಸ್ವಾಗತ: ಸಾಲದ ಸುಳಿಗೆ ಸಿಲುಕಿರುವ ಗ್ರೀಕ್‌ನ ಅರ್ಥವ್ಯವಸ್ಥೆ ಸುಸ್ಥಿರಗೊಳಿಸಲು 100 ಶತಕೋಟಿ `ಯೂರೋ~ಗಳಷ್ಟು ಪರಿಹಾರ ಕೊಡುಗೆ ನೀಡಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಐರೋಪ್ಯ ಒಕ್ಕೂಟಗಳು ನಿರ್ಧರಿಸಿರುವುದನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ವಾಗತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry