ಶುಕ್ರವಾರ, ಏಪ್ರಿಲ್ 23, 2021
31 °C

ಅಮೆರಿಕದ ಆರ್ಥಿಕ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಟಿವಿ ಚಾನೆಲ್‌ಗಳು ಸೇರಿದಂತೆ ಸಿರಿಯಾದ ಅಧ್ಯಕ್ಷ ಬಷಾರ್ ಅಲ್ ಅಸ್ಸದ್ ವಿರೋಧಿಗಳಿಗೆ ಅಮೆರಿಕ ಗೌಪ್ಯವಾಗಿ ಹಣಕಾಸು ನೆರವು ನೀಡುತ್ತಿದೆ ಎಂಬ ಸಂಗತಿ ಬಯಲಾಗಿರುವ ರಾಜತಾಂತ್ರಿಕ ದಾಖಲೆಗಳಿಂದ ತಿಳಿದುಬಂದಿದೆ.ಲಂಡನ್ ಮೂಲದ ಬರ್ದಾ ಚಾನೆಲ್ ಸೇರಿದಂತೆ ಅನೇಕ ಟಿವಿ ಚಾನೆಲ್‌ಗಳು ಸಿರಿಯಾದಲ್ಲಿ ನಡೆಯುತ್ತಿರುವ ಜನಾಂದೋಲನಕ್ಕೆ ಭಾರಿ ಪ್ರಚಾರ ನೀಡುತ್ತಿರುವುದರ ಹಿಂದೆ ಅಮೆರಿಕದ ಕೈವಾಡವಿದೆ ಎಂಬುದು ಬಯಲಾಗಿರುವ ಸಂಗತಿಯು ರಾಜತಾಂತ್ರಿಕ ದಾಖಲೆಗಳಿಂದ ವ್ಯಕ್ತವಾಗಿದೆ.ಸರ್ವಾಧಿಕಾರಿ ಅಸ್ಸದ್ ವಿರೋಧಿಗಳು ಚಳವಳಿಯನ್ನು ತೀವ್ರಗೊಳಿಸುವಂತೆ ಕುಮ್ಮಕ್ಕು ನೀಡಿರುವ ಅಮೆರಿಕ, ಅದಕ್ಕೆ ಅಗತ್ಯವಾದ ಹಣಕಾಸು ನೆರವು ನೀಡಿದೆ ಎಂದು ವಿಕಿಲೀಕ್ಸ್ ವೆಬ್‌ಸೈಟ್ ತಿಳಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.ಇದುವರೆಗೆ ಅಮೆರಿಕ ಟಿವಿ ಚಾನೆಲ್ ಮತ್ತು ಅಸ್ಸದ್ ವಿರೋಧಿ ಹೋರಾಟಗಾರರಿಗೆ ಆರು ದಶಲಕ್ಷ ಡಾಲರ್‌ಗಳನ್ನು ನೀಡಿದೆ.ಇದಲ್ಲದೆ ಇಸ್ರೇಲ್, ಲೆಬನಾನ್ ಮತ್ತು ಇರಾಕ್‌ಗೆ ಸಂಬಂಧಿಸಿದ ನೀತಿಯನ್ನು ಬದಲಿಸುವಂತೆ ಸಿರಿಯಾ ಸರ್ಕಾರದ ಮೇಲೆ ಅಮೆರಿಕ ಒತ್ತಡ ಹೇರುತ್ತ ಬಂದಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.