ಅಮೆರಿಕದ ಉದ್ಯೋಗ ವೀಸಾ ನಿರಾಕರಣೆ: ಭಾರತೀಯರೇ ಹೆಚ್ಚು

7

ಅಮೆರಿಕದ ಉದ್ಯೋಗ ವೀಸಾ ನಿರಾಕರಣೆ: ಭಾರತೀಯರೇ ಹೆಚ್ಚು

Published:
Updated:

ವಾಷಿಂಗ್ಟನ್ (ಪಿಟಿಐ): ಇತರ ದೇಶಗಳಿಗೆ ಹೋಲಿಸಿದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತೀಯ ಮೂಲದ ವೃತ್ತಿಪರರಿಗೆ ಉದ್ಯೋಗ ವೀಸಾ ನೀಡಲು ಅಮೆರಿಕದ ವಲಸೆ ಅಧಿಕಾರಿಗಳು ನಿರಾಕರಿಸಿದ ಸಂದರ್ಭಗಳು ಹೆಚ್ಚಿವೆ ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.2008ರಿಂದ ಎಲ್-1 ಮತ್ತು ಎಚ್-1ಬಿ ವೀಸಾಕ್ಕಾಗಿ ಸಲ್ಲಿಸಿದ ಅನೇಕ ಅರ್ಜಿ ತಿರಸ್ಕರಿಸಲಾಗಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯ ವರದಿ ಆಧರಿಸಿ ವಿಶ್ಲೇಷಿಸಲಾಗಿದೆ. ವೀಸಾಕ್ಕಾಗಿ ಅರ್ಜಿ ಸಲ್ಲಿಸಿದವರಲ್ಲಿ ಭಾರತೀಯ ಮೂಲದ ವೃತ್ತಿಪರರು ಮತ್ತು ಸಂಶೋಧನಾಕಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯ ಉದ್ಯೋಗಿಗಳು ಮತ್ತು ಕಂಪೆನಿಗಳಿಗೆ ಎದುರಾಗಿರುವ ಪ್ರಬಲ ಸ್ಪರ್ಧೆ ಭಾರತೀಯರಿಗೆ ವೀಸಾ ನಿರಾಕರಿಸಲು ಕಾರಣ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry