ಅಮೆರಿಕದ ನಾಯಿ

ಸೋಮವಾರ, ಜೂಲೈ 22, 2019
26 °C

ಅಮೆರಿಕದ ನಾಯಿ

Published:
Updated:

ಲಂಡನ್ (ಪಿಟಿಐ): ಅಮೆರಿಕದ ನೂರಾರು ತಳಿ ನಾಯಿಗಳ ಮೂಲ ಏಷ್ಯಾ ಎಂಬ ವಿಸ್ಮಯಕಾರಿ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಸ್ಟಾಕ್‌ಹೋಮ್‌ನ ಕೆಟಿಎಚ್ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಂಶವಾಹಿ ವಿಭಾಗದ ತಜ್ಞರು ಈ ಕುರಿತು ಸಂಶೋಧನೆ ನಡೆಸಿದ್ದು, ಅಮೆರಿಕಕ್ಕೆ ಬಂದ ಯುರೋಪಿಯನ್ನರಿಂದಾಗಿ ಈ ದೇಶದ ಮೂಲ ತಳಿ ನಾಯಿಗಳು ನಶಿಸಿದವು ಎಂದೇ ನಂಬಲಾಗಿತ್ತು.

ಇದು ಸಂಪೂರ್ಣ ಸತ್ಯವಲ್ಲ ಎಂದಿರುವ ತಜ್ಞರು, ಅಮೆರಿಕದ ನೂರಾರು ನಾಯಿ ತಳಿಗಳ ಮೂಲ ಪ್ರಾಚೀನ ಏಷ್ಯಾ. ಶೇ 30 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಷ್ಟು ಶರೀರದ ಗುಣಲಕ್ಷಣಗಳನ್ನು ಇವು ಯುರೋಪ್‌ನ ನಾಯಿಗಳಿಂದ ಪಡೆದಿವೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry