ಅಮೆರಿಕದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮೂವರ ಸೆರೆ

7

ಅಮೆರಿಕದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮೂವರ ಸೆರೆ

Published:
Updated:

ಲಖನೌ: ಇಲ್ಲಿ ಓದುತ್ತಿರುವ ಅಮೆರಿಕದ ವಿದ್ಯಾರ್ಥಿನಿಯೊಬ್ಬಳಿಗೆ ಟೆಂಪೊ ಚಾಲಕ ಸೇರಿ ಮೂವರು ಯುವಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಶನಿವಾರ ರಾತ್ರಿ  ನಡೆದಿದೆ. ಈ ಯುವಕರನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಕಳುಹಿಸಲಾಗಿದೆ.ಶನಿವಾರ ರಾತ್ರಿ ಲಖನೌನ ತುಲಿಯಾಗಂಜ್‌ ಪ್ರದೇಶದಲ್ಲಿ ಈ ಯುವತಿ ಟೆಂಪೊ ಹತ್ತಿದ್ದಳು. ಟೆಂಪೊದಲ್ಲಿದ್ದ  ಎಲ್ಲಾ ಪ್ರಯಾಣಿಕರು ಇಳಿದು ಹೋದ ಮೇಲೆ ಟೆಂಪೊ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಲೈಂಗಿಕ ಕಿರುಕುಳ ನೀಡಿದರು. ಸಹಾಯಕ್ಕಾಗಿ ಕೂಗಿದಾಗ ಟೆಂಪೊವಿನ ಟೇಪ್‌ ರೆಕಾರ್ಡರ್‌ ಶಬ್ದ ಹೆಚ್ಚಿಸಿದರು. ಇದರಿಂದ ಭಯಗೊಂಡು ಚಲಿಸುತ್ತಿದ್ದ ಟೆಂಪೊದಿಂದ ಹಾರಿ ಬಚಾವಾಗಿರುವುದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.ಯುವತಿ ನೀಡಿದ ಟೆಂಪೊ ಸಂಖ್ಯೆ ಆಧರಿಸಿ  ಚಾಲಕ ವೀರು ಮತ್ತು ಆತನ ಸ್ನೇಹಿತ ರಾಜನ್‌ ಹಾಗೂ ಆಯುಷ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಯುವತಿ ಅಮೆರಿಕದ ಪ್ರಜೆಯಾಗಿದ್ದು, ಗೋಕಲೆ ಮಾರ್ಗದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿನ ಇಂದಿರಾ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry