ಅಮೆರಿಕದ ವಿಳಂಬ ನೀತಿ

7
ದೇವಯಾನಿಗೆ ಹೆಚ್ಚಿನ ರಾಜತಾಂತ್ರಿಕ ರಕ್ಷಣೆ

ಅಮೆರಿಕದ ವಿಳಂಬ ನೀತಿ

Published:
Updated:
ಅಮೆರಿಕದ ವಿಳಂಬ ನೀತಿ

ವಾಷಿಂಗ್ಟನ್ (ಪಿಟಿಐ): ಮನೆ ಕೆಲಸ­ದಾಕೆಗೆ ನೀಡಬೇಕಾದ ವೇತನ­ದಲ್ಲಿ ವಂಚನೆ ಮಾಡಲಾಗಿದೆ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ  ದೇವ­­ಯಾನಿ ಖೋಬ್ರಾಗಡೆ ಅವರನ್ನು ಸಾರ್ವಜನಿಕವಾಗಿ ಬಂಧಿಸಿ ಅವಮಾನಿ­ಸಿದ ಪ್ರಕರಣದಲ್ಲಿ ಅಮೆರಿಕ ದಿನ­ಕ್ಕೊಂದು ವರಸೆ ತೆಗೆಯುತ್ತಲೇ ಇದೆ.ಖೋಬ್ರಾಗಡೆ ಬಂಧನ ಪ್ರಕರಣ­ದಲ್ಲಿ ಕ್ಷಮೆ ಕೇಳುವುದಿಲ್ಲ ಎಂದು  ಹೇಳಿ­ರುವ ಅಮೆರಿಕ, ಇದೀಗ  ಅವರನ್ನು ವಿಶ್ವಸಂಸ್ಥೆಗೆ ವರ್ಗಾಯಿಸಿದ್ದ­ರಿಂದ ಅವರಿಗೆ ನೀಡಬೇಕಾದ ಹೆಚ್ಚಿನ ರಾಜ­ತಾಂತ್ರಿಕ ರಕ್ಷಣೆಗೆ ಸಂಬಂಧಿಸಿದ ಅರ್ಜಿ ಇನ್ನೂ  ಪರಿಶೀಲನೆಯ ಹಂತದಲ್ಲಿದೆ ಎಂದು  ಹೇಳಿದೆ.‘ದೇವಯಾನಿ ಅವರಿಗೆ ಹೆಚ್ಚಿನ ರಾಜತಾಂತ್ರಿಕ ರಕ್ಷಣೆ ಒದಗಿಸುವ ಸಂಬಂಧದ ಅರ್ಜಿಯ  ಪರಿಶೀಲನೆ ನಡೆಯುತ್ತಿದೆ. ಈ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ ಎಂಬುದನ್ನು ಹೇಳ­ಲಾ­ಗದು’ ಎಂದು ಅಮೆರಿಕದ ವಿದೇ­ಶಾಂಗ ಇಲಾಖೆ ವಕ್ತಾರರೊಬ್ಬರು ತಿಳಿಸಿದ್ದಾರೆ.ಡಿ.20 ರಂದು ವಿಶ್ವಸಂಸ್ಥೆಯಿಂದ ಕಳಿಸಲಾದ ಅರ್ಜಿ­ಯನ್ನು ಅಮೆರಿಕ ಸ್ವೀಕರಿಸಿದೆ. ಸಾಮಾನ್ಯವಾಗಿ ಇಂತಹ ಅರ್ಜಿ ಬಂದಾಗ  ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚು ಸ­ಮಯ ತೆಗೆ­ದು­ಕೊಳ್ಳ­ಲಾ­ಗಿದೆ. ಈ ಹಿಂದಿನ ಮನ­­ವಿಗಳಂತೆ ದೇವ­ಯಾನಿ ಅವರ ಅರ್ಜಿ­ಪರಿಗಣಿ­ಸ­ಲಾ­ಗದು ಎಂದು ವಕ್ತಾರರು ಹೇಳಿದ್ದಾರೆ.ಸ್ಥಳೀಯ ವೇತನಕ್ಕೆ ಅನುಗುಣವಾಗಿ: ವಿಶ್ವದಾ­ದ್ಯಂತ ವಿವಿಧ ದೇಶಗಳಲ್ಲಿ ಕಾರ್ಯ­ನಿರ್ವ­ಹಿಸುವ  ತನ್ನ ರಾಯ ಭಾರಿಗಳ ವೇತನ ಸ್ಥಳೀಯ ಕಾನೂನಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಮೆರಿಕದ ವಕ್ತಾರರೊಬ್ಬರು ಹೇಳಿದ್ದಾರೆ.ದೇವಯಾನಿ ಅವರನ್ನು ಬಂಧಿಸಿದ ನಂತರ ನವದೆಹಲಿ­ಯಲ್ಲಿ ಕಾರ್ಯನಿ­ರ್ವ­ಹಿಸುವ ಅಮೆರಿಕದ ರಾಯಭಾರಿ­ಗಳಿಗೆ ನೀಡಲಾಗುವ ವೇತನದ ವಿವರ­ವನ್ನು ಭಾರತ ಕೇಳಿತ್ತು. ಅಮೆರಿಕದ ರಾಯಭಾರ ಕಚೇರಿ ಗಳಲ್ಲಿ ಕೆಲಸ ಮಾಡುವ ಭಾರತದ ಸಿಬ್ಬಂದಿಗಳಾದ ಅಡುಗೆ ಮತ್ತು ಚಾಲಕರಿಗೆ ರೂ.12,000ದಿಂದ ರೂ. 15,000 ವರೆಗೆ ನೀಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಪ್ರತಿ ಗಂಟೆಗೆ ರೂ. 587 (9.47 ಡಾಲರ್‌) ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry