ಅಮೆರಿಕದ ವೀಸಾ ನೀತಿ ಬದಲು

7

ಅಮೆರಿಕದ ವೀಸಾ ನೀತಿ ಬದಲು

Published:
Updated:

ವಾಷಿಂಗ್ಟನ್ (ಪಿಟಿಐ): ಸಮಗ್ರ ವೀಸಾ ನೀತಿ ನೆನೆಗುದಿಯಲ್ಲಿರುವಾಗಲೇ, ನುರಿತ ವೃತ್ತಿಪರರನ್ನು ಆಕರ್ಷಿಸಲು ಅಮೆರಿಕ ತನ್ನ ಎಫ್-1 ಮತ್ತು ಎಚ್-1ಬಿ ವೀಸಾಗಳಲ್ಲಿ ಕೆಲವು ಸುಧಾರಣೆಗಳನ್ನು ತರಲು ಮುಂದಾಗಿದೆ.ಅಮೆರಿಕದ ಈ ಕ್ರಮದಿಂದ ಭಾರತ ಸೇರಿದಂತೆ ಹೆಚ್ಚಿನ ಸಂಖೆಯಲ್ಲಿ ವೃತ್ತಿಪರರನ್ನು ಹೊಂದಿರುವ ದೇಶಗಳಿಗೆ ಅನುಕೂಲವಾಗಲಿದೆ. ಸುಧಾರಣೆ ತರಲು ಬಯಸಿರುವ ಅಂಶಗಳ ಪೈಕಿ ಎಚ್-1ಬಿ ವೀಸಾ ಹೊಂದಿರುವ ವ್ಯಕ್ತಿಗಳ ಪತ್ನಿ ಅಥವಾ ಪತಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡುವುದು ಸೇರಿದೆ.ಎಫ್-1 ವೀಸಾ ಹೊಂದಿರುವ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ವಿದ್ಯಾರ್ಥಿಗಳಿಗೆ ಐಚ್ಛಿಕ ಪ್ರಾಯೋಗಿಕ ತರಬೇತಿ ಪಡೆಯಲು 17 ತಿಂಗಳ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳ ಪತಿ ಅಥವಾ ಪತ್ನಿ ಅರೆಕಾಲಿಕ ವ್ಯಾಸಂಗ ಮಾಡಬಹುದು. ಅಲ್ಲದೆ ಎಫ್-1 ವೀಸಾ ಹೊಂದಿರುವ ಪರಿಣತ ಸಂಶೋಧಕರು ಮತ್ತು ಪ್ರೊಫೆಸರ್‌ಗಳು ತಮ್ಮ ಶೈಕ್ಷಣಿಕ ಸಾಧನೆಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ಆಂತರಿಕ ಭದ್ರತಾ ಇಲಾಖೆ ಫೆ.22 `ವಸತಿಗಳಲ್ಲಿಯೇ ಉದ್ಯಮ~ ಎನ್ನುವ ಯೋಜನೆ ಜಾರಿಗೆ ತರಲಿದೆ. ಇಂತಹ ಉದ್ಯಮಿಗಳಿಗೆ ಹೆಚ್ಚಿನ ಮಾಹಿತಿ ನೀಡಲು ಸಿಲಿಕಾನ್ ವ್ಯಾಲಿಯಲ್ಲಿ ಸಮ್ಮೇಳನವೊಂದನ್ನು ನಡೆಸಲಿದೆ.21ನೇ ಶತಮಾನದ ಆಂತರಿಕ ಭದ್ರತೆ ಮತ್ತು ಆರ್ಥಿಕ ಅಗತ್ಯತೆಗಳನ್ನು ಸರಿದೂಗಿಸುವ ಉದ್ದೇಶ ಹೊಂದಿರುವ ಅಧ್ಯಕ್ಷ ಬರಾಕ್ ಒಬಾಮ ಅವರ ಆಶಯಗಳಿಗೆ ಅನುಗುಣವಾಗಿ ವೀಸಾ ನೀತಿಯಲ್ಲಿ ಸುಧಾರಣೆ ತರಲು ಮುಂದಾಗಿರುವುದಾಗಿ ಆಂತರಿಕ ಭದ್ರತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಅಮೆರಿಕದ ಹಳಿತಪ್ಪಿರುವ ವಲಸೆ ನೀತಿಯಲ್ಲಿ ಸುಧಾರಣೆ ತರುವುದು ಅಧ್ಯಕ್ಷರ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಆಂತರಿಕ ಭದ್ರತಾ ಇಲಾಖೆಗೆ ಕಠಿಣ ಸೂಚನೆಗಳನ್ನು ನೀಡಿದ್ದಾರೆ. ಅದಕ್ಕನುಗುಣವಾಗಿ ಈಗ ಎಫ್-1 ಮತ್ತು ಎಚ್-1ಬಿ ವೀಸಾ ನೀತಿಯಲ್ಲಿ ಸುಧಾರಣೆಗೆ ಮಾಡುವುದರಿಂದ ದೇಶದ ಆಂತರಿಕ ಭದ್ರತೆ ಮತ್ತು ಆರ್ಥಿಕ ಅಗತ್ಯತೆಗಳನ್ನು ಸರಿದೂಗಿಸಲು ಸಾಧ್ಯ ಎಂದೂ ಅಧಿಕಾರಿಗಳು ಹೇಳಿದ್ದಾರೆ.ಸಮಗ್ರ ವಲಸೆ ನೀತಿಯನ್ನು ಶಾಸನಬದ್ಧಗೊಳಿಸುವ ಮೂಲಕ ಹೆಚ್ಚಿನ ವಿದೇಶಿ ವಲಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಜತೆಗೆ ದೇಶಕ್ಕೆ ಬಂದು ನೆಲೆನಿಂತ ವಲಸಿಗರು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೇ, ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತಾರೆ.ಇದಕ್ಕಾಗಿಯೇ `ಸಾರ್ಟ್‌ಅಫ್ ವೀಸಾ~ ನೀತಿ ಜಾರಿಗೆ ತರುತ್ತಿದ್ದು, ಇದು ಎಚ್-1ಬಿ ಯೋಜನೆಯನ್ನು ಬಲವರ್ಧನೆಗೊಳಿಸಲಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯದ ವಿದೇಶಿ ಪದವೀಧರರಿಗಾಗಿಯೇ `ಸ್ಟಾಫ್ಲಿಂಗ್~ ಗ್ರೀನ್ ಕಾರ್ಡ್ ನೀಡುವ ಮೂಲಕ ಅಂತಹ ವಿದ್ಯಾರ್ಥಿಗಳು ಅಮೆರಿಕದಲ್ಲಿ ಡಿಪ್ಲೊಮಾ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry