ಶನಿವಾರ, ಜನವರಿ 25, 2020
15 °C

ಅಮೆರಿಕದ ಶಾಲೆಯಲ್ಲಿ ಮತ್ತೆ ಗುಂಡಿನ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಂಟೆನ್ನಿಯಲ್, ಅಮೆರಿಕ (ಎಪಿ/ರಾಯಿಟರ್ಸ್): ಶಿಕ್ಷಕರೊಬ್ಬರ ವಿರುದ್ಧ ಹಗೆತನ ಹೊಂದಿದ್ದ ಹದಿಹರೆಯದ ವ್ಯಕ್ತಿಯೊಬ್ಬ ಶಾಟ್‌ಗನ್‌ ಜೊತೆಗೆ ಕೊಲೊರಾಡೊ ಹೈಸ್ಕೂಲ್‌ಗೆ ನುಗ್ಗಿ, ಗುಂಡು ಹಾರಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಘಟಿಸಿದೆ.

ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಚಿಂತಾಜನಕವಾಗಿದೆ. ಮತ್ತೊಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಶೂಟರ್‌ನ ಸಿಟ್ಟಿಗೆ ಗುರಿಯಾಗಿದ್ದ ಶಿಕ್ಷಕ ಮಾತ್ರ ಅರಾಪಹೊಯ್ ಹೈಸ್ಕೂಲ್ ವಿದ್ಯಾರ್ಥಿಗಳ ಜಾಣ್ಮೆಯಿಂದಾಗಿ ಅವಘಡದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ. ವಿದ್ಯಾರ್ಥಿಗಳು ಸಂಭಾವ್ಯ ದುರಂತದ ಸುಳಿವು ನೀಡಿದ ಬೆನ್ನಲ್ಲೆ ಶಿಕ್ಷಕ ಶಾಲಾ ಕಟ್ಟಡದಿಂದ ತಪ್ಪಿಸಿಕೊಂಡಿದ್ದಾರೆ.

ಅಮೆರಿಕದ ನ್ಯೂಟೌನ್‌ ಶಾಲೆಯಲ್ಲಿ ನಡೆದ ಶೂಟೌಟ್ ಘಟನೆಯ ವರ್ಷಾಚರಣೆಯ ಮುನ್ನಾದಿನವೇ ಈ ದುರ್ಘಟನೆ ನಡೆದಿದೆ.

ಶೂಟರ್‌ನನ್ನು 18 ವರ್ಷದ ಕಾರ್ಲ್ ಹಾಲ್ವೆರ್ಸನ್ ಪೀಯರ್ಸನ್ ಎಂದು ಗುರುತಿಸಲಾಗಿದೆ.

‘ಶಾಟ್‌ಗನ್ ನೊಂದಿಗೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಡೆನ್ವರ್ ಹೊರವಲಯದಲ್ಲಿರುವ ಹೈಸ್ಕೂಲ್‌ಗೆ ನುಗ್ಗಿದ ಪೀಯರ್ಸನ್, ಶಿಕ್ಷಕ ಇರುವ ಸ್ಥಳವನ್ನು ಕೇಳಿದ್ದಾನೆ. ಅದೇ ವೇಳೆಗೆ ಹತ್ತಿರವಿದ್ದ 15 ವರ್ಷದ ಬಾಲಕಿ ಮೇಲೆ ಗುಂಡು ಹಾರಿಸಿದ್ದಾನೆ’ ಎಂದು ಅರಾಪಹೊಯ್ ಪ್ರದೇಶದ ಷರೀಫ್‌(ಜಿಲ್ಲೆಯ ಶಾಂತಿ ಪರಿಪಾಲನೆಯ ಜವಾಬ್ದಾರಿ ಹೊತ್ತಿರುವ ಚುನಾಯಿತ ಅಧಿಕಾರಿ) ಗೇ ಸನ್‌ ರಾಬಿನ್‌ಸನ್‌ ತಿಳಿಸಿದ್ದಾರೆ.

ಘಟನೆಗೆ ‘ಸೇಡಿನ’ ಕಾರಣ ಇರಬಹುದೇ ಎಂಬುದ‌ನ್ನು ‍ಪೊಲೀಸರು ಶೋಧಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2012ರ ಡಿಸೆಂಬರ್ 14 ರಂದು ಅಮೆರಿಕದ ನ್ಯೂಟೌನ್‌ನಲ್ಲಿರುವ ಕನೆಕ್ಟಿಕಟ್‌‌ ನ ಸ್ಯಾಂಡಿಹುಕ್ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ಮಳೆಗೈದು 20 ಮಕ್ಕಳು ಹಾಗೂ  ಇತರ ಆರು ಮಂದಿಯನ್ನು   ಪಡೆದಿದ್ದ. ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಪ್ರತಿಕ್ರಿಯಿಸಿ (+)