ಅಮೆರಿಕನ್ನರಿಗೆ ನಿದ್ರಾನಡಿಗೆ ಸಮಸ್ಯೆ

7

ಅಮೆರಿಕನ್ನರಿಗೆ ನಿದ್ರಾನಡಿಗೆ ಸಮಸ್ಯೆ

Published:
Updated:
ಅಮೆರಿಕನ್ನರಿಗೆ ನಿದ್ರಾನಡಿಗೆ ಸಮಸ್ಯೆ

ವಾಷಿಂಗ್ಟನ್ (ಐಎಎನ್‌ಎಸ್): ಹೆಚ್ಚುತ್ತಿರುವ ಒತ್ತಡ ಹಾಗೂ ಕಳವಳಕಾರಿ ಮನಸ್ಸಿನ ಸ್ಥಿತಿಯಿಂದಾಗಿ ಅಮೆರಿಕದ ಸುಮಾರು 80.40  ಲಕ್ಷ ವಯಸ್ಕರು ನಿದ್ರಾನಡಿಗೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

`ಸಾಮಾನ್ಯವಾಗಿ ವ್ಯಕ್ತಿಯೊಬ್ಬರ ಮಾನಸಿಕ ಏರಿಳಿತಗಳು ನಿದ್ರಾನಡಿಗೆಗೆ ಕಾರಣ ಎನ್ನಲಾಗುತ್ತಿದ್ದರೂ ಈ ಸಮಸ್ಯೆಗೆ ನಿಖರ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಈಗ ನಡೆಸಿದ ಸಂಶೋಧನೆಯ ಹೊರತಾಗಿ ಹತ್ತು ವರ್ಷಗಳ ಹಿಂದೆ ಈ ಸಂಬಂಧ ಯುರೋಪಿಯನ್ ಸಮುದಾಯದಲ್ಲಿ ನಾವು ಅಧ್ಯಯನ ಕೈಗೊಂಡಿದ್ದು ಒಟ್ಟು ಜನಸಮುದಾಯದ ಶೇ 2 ರಷ್ಟು ಜನರು ನಿದ್ರಾನಡಿಗೆ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬ ವರದಿ ನೀಡಿದ್ದೆವು~ ಎಂದು ಸಂಶೋಧಕರು ವಿವರಿಸುತ್ತಾರೆ.

`ನಿದ್ರಾನಡಿಗೆಗೆ ಸಂಬಂಧಿಸಿರುವ ಔಷಧಗಳ ಬಳಕೆಯ ಮಹತ್ವ ಹಾಗೂ ಮಾನಸಿಕ ಏರಿಳಿತದ ಕುರಿತು ಸಹ ನಾವು ಅಧ್ಯಯನ ನಡೆಸಿದ್ದೇವೆ. ಅಮೆರಿಕದ 15 ರಾಜ್ಯಗಳ 19,136 ವ್ಯಕ್ತಿಗಳನ್ನು ಸಂದರ್ಶಿಸಿ ಅವರ ಮಾನಸಿಕ ಆರೋಗ್ಯ, ವೈದ್ಯಕೀಯ ಇತಿಹಾಸವನ್ನು ಅವಲೋಕಿಸಿ ವರದಿ ಸಿದ್ಧಪಡಿಸಲಾಗಿದೆ~ ಎಂದು ಸಂಶೋಧಕ ಒಹೆಯಾನ್ ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry