ಗುರುವಾರ , ಡಿಸೆಂಬರ್ 12, 2019
17 °C

ಅಮೆರಿಕಾದಲ್ಲಿ ಡಾನ್2 ಭರ್ಜರಿ ಭೇಟೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕಾದಲ್ಲಿ ಡಾನ್2 ಭರ್ಜರಿ ಭೇಟೆ!

ವಾಷಿಂಗ್ಟನ್, ಅಮೆರಿಕಾ (ಪಿಟಿಐ): ಬಾಲಿವುಡ್ ನ ಖ್ಯಾತ ನಟ ಶಾರುಕ್ ಖಾನ್ ನಟಿಸಿರುವ ರೋಮಾಂಚಕ ಚಲನ ಚಿತ್ರ `ಡಾನ್2~ ಅಮೆರಿಕಾದ ಚಿತ್ರಮಂದಿರಗಳಲ್ಲಿ ಭರ್ಜರಿ ಗಳಿಕೆ  ಮಾಡುತ್ತಿದೆ.

ಫರ‌್ಹಾನ ಅಕ್ತರ್ ನಿರ್ದೇಶನದ ಡಾನ್ 2 ಚಿತ್ರವು, ಅಮೆರಿಕಾ, ಕೆನಡಾದಲ್ಲಿನ 160ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಅದು ಹಿಂದಿನ ಎಲ್ಲಾ ಚಿತ್ರಗಳ ಗಳಿಕೆಯನ್ನು ಹಿಂದಕ್ಕೆ ತಳ್ಳಿದೆ.

ಕ್ರಿಸ್‌ಮಸ್ ಹಬ್ಬ ಹಾಗೂ ನೂತನ ವರ್ಷಾಚರಣೆಯ ರಜಾದಿನಗಳ ಲಾಭ ಪಡೆದಿರುವ ~ಡಾನ್ 2~ ಚಿತ್ರವು ಅಮೆರಿಕದ ಸಾಕಷ್ಟು ಚಿತ್ರಪ್ರೇಮಿಗಳನ್ನು ತನ್ನತ್ತ ಸೆಳೆದಿದೆ. ತನ್ನ ಮೊದಲ 11 ದಿನಗಳ ಪ್ರದರ್ಶನದಲ್ಲೇ ಅದು  3.3ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಬಾಚಿಕೊಂಡಿದೆ.ಡಾನ್2ಗೂ ಮುಂಚೆ ಅಮೆರಿಕಾದಲ್ಲಿ ತೆರೆಕಂಡು ಅತ್ಯಧಿಕ ಲಾಭ ಗಳಿಸಿದ್ದ, ಶಾರುಕ್ ಖಾನ್ ಅವರೇ ನಟಿಸಿದ್ದ ~ರಾ ಒನ್~ ಚಿತ್ರ ಹಾಗೂ ಋತ್ತಿಕ್ ರೋಷನ್ ನಟಿಸಿದ್ದ ~ಜಿಂದಗಿ ನಾ ಮಿಲೆಂಗೆ ದುಬಾರಾ~ ಸಲ್ಮಾನ್ ಖಾನ್ ನಟಿಸಿದ್ದ ~ಬಾಡಿಗಾರ್ಡ್~ ಮತ್ತು ~ರೆಡಿ~  ಚಿತ್ರಗಳ ಗಳಿಕೆಯ ದಾಖಲೆಯನ್ನು ಮುರಿದಿದೆ ಎನ್ನಲಾಗಿದೆ.

 

ಪ್ರತಿಕ್ರಿಯಿಸಿ (+)