ಬುಧವಾರ, ಅಕ್ಟೋಬರ್ 23, 2019
24 °C

ಅಮೆರಿಕಾದ ಯೋಧನಿಗೆ ಇರಾನ್‌ನಲ್ಲಿ ಗಲ್ಲು ಶಿಕ್ಷೆ

Published:
Updated:

ಟೆಹರಾನ್ (ಎಎಫ್‌ಪಿ):  ಇರಾನ್‌ನಲ್ಲಿ ಗೂಢಚರ್ಯೆ ನಡೆಸುತ್ತಿದ್ದ ಎಂಬ ಆರೋಪದ ಮೇರೆಗೆ ಅಮೆರಿಕಾದ ಮಾಜಿ ಯೋಧ ಅಮೀರ್ ಮಿರ್ಜೈ ಹೆಕ್ಮತಿ (28) ಎಂಬಾತನಿಗೆ ಇರಾನ್‌ನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.ಇರಾನ್‌ನ ಪೌರತ್ವವನ್ನೂ ಹೊಂದಿದ್ದ ಈತ ಸಿಐಎ ಪರ ಕೆಲಸ ಮಾಡುತ್ತಿದ್ದು, ಇರಾನ್‌ನಲ್ಲಿ ಭಯೋತ್ಪಾದಕತೆಯನ್ನು ಹರಡುವಲ್ಲಿ ಪ್ರಯತ್ನ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.ಈತನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಅಮೆರಿಕ ದಲ್ಲಿರುವ ಹಿಕ್ಮತ್ ಕುಟುಂಬ ಆತ ಇರಾನ್‌ನಲ್ಲಿರುವ ತನ್ನ ಅಜ್ಜಿ ಯನ್ನು ನೋಡಲು ಹೋಗಿದ್ದ ಹೊರತು ಗೂಢಚಾರಿಯಾಗಿ ಅಲ್ಲ ಎಂಬ ಹೇಳಿಕೆ ನೀಡಿ ಆರೋಪವನ್ನು ತಳ್ಳಿ ಹಾಕಿದೆ. ಈ ನಡುವೆ ಹೆಕ್ಮತಿಯನ್ನು ಬಿಡುಗಡೆ ಮಾಡಲು ಅಮೆರಿಕ ಆಗ್ರಹಿಸಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)