ಅಮೆರಿಕ ಅಧಿಕಾರಿ ವಿರುದ್ಧ ಪಾಕ್ ಕೊಲೆ ಮೊಕದ್ದಮೆ.

7

ಅಮೆರಿಕ ಅಧಿಕಾರಿ ವಿರುದ್ಧ ಪಾಕ್ ಕೊಲೆ ಮೊಕದ್ದಮೆ.

Published:
Updated:

ಲಾಹೋರ್ (ಪಿಟಿಐ): ತಾನು ಆತ್ಮರಕ್ಷಣೆಗಾಗಿ ಇಬ್ಬರು ಪಾಕಿಸ್ತಾನಿಯರನ್ನು ಹತ್ಯೆ ಮಾಡಿದ್ದಾಗಿ ಅಮೆರಿಕ ಅಧಿಕಾರಿ ರೇಮಂಡ್ ಡೇವಿಸ್ ಹೇಳಿದ್ದರೂ, ಅದಕ್ಕೆ ಪೂರಕವಾದ ಯಾವುದೇ ಸಾಕ್ಷ್ಯಗಳನ್ನು ಒದಗಿಸದ ಕಾರಣ, ಅವರ ವಿರುದ್ಧ ಕೊಲೆ ಮೊಕದ್ದಮೆಯನ್ನು ದಾಖಲಿಸಿರುವುದಾಗಿ ಪಾಕ್ ಪೊಲೀಸರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.

‘ನಗರದಲ್ಲಿ ಜ. 27ರಂದು ಡೇವಿಸ್ ಇಬ್ಬರನ್ನು ಗುಂಡಿಟ್ಟು ಕ್ರೂರವಾಗಿ ಹತ್ಯೆ ಮಾಡಿರುವುದಾಗಿ ಪೊಲೀಸ್ ಮುಖ್ಯಸ್ಥ ಅಸ್ಲಾಂ ತರೀನ್ ಹೇಳಿದ್ದಾರೆ.ಡೇವಿಸ್ ಅವರನ್ನು 15 ದಿನಗಳ ಕಾಲ ಕಾರಾಗೃಹಕ್ಕೆ ಕಳುಹಿಸಲು ಆದೇಶಿಸಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಡೇವಿಸ್ ವಿರುದ್ಧ ಮಧ್ಯಂತರ ಆರೋಪಪಟ್ಟಿ ತಯಾರಿಸಿ, ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪಾಕ್‌ಗೆ ಅಮೆರಿಕ ಬೆದರಿಕೆ (ವಾಷಿಂಗ್ಟನ್): ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ತನ್ನ ಅಧಿಕಾರಿ ರೇಮಂಡ್ ಡೇವಿಸ್ ಅವರನ್ನು ತಕ್ಷಣ ಬಿಡುಗಡೆ ಮಾಡದಿದ್ದಲ್ಲಿ, ತಾನು ಪಾಕ್ ರಾಯಭಾರಿಯನ್ನು ದೇಶದಿಂದ ಹೊರಹಾಕುವುದಲ್ಲದೆ, ಪಾಕಿಸ್ತಾನದಲ್ಲಿರುವ ತನ್ನ ಕಾನ್ಸುಲೇಟ್ ಗಳನ್ನು ಮುಚ್ಚುವುದಾಗಿ ಪಾಕ್‌ಗೆ ಅಮೆರಿಕ ಬೆದರಿಕೆ ಹಾಕಿದೆ.ಇದರಿಂದ ರಾಜತಾಂತ್ರಿಕ ಬಿಕ್ಕಟ್ಟು ನಿರ್ಮಾಣವಾಗಿದೆ. ಒಬಾಮರ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಾಮ್ ಡೋನಿಲಾನ್  ಪಾಕ್ ರಾಯಭಾರಿ ಹುಸೇನ್ ಹಕ್ಕಾನಿ ಅವರನ್ನು ಶ್ವೇತಭವನಕ್ಕೆ ಕರೆಸಿಕೊಂಡು, ಮುಂದಿನ ಪರಿಣಾಮ ಎದುರಿಸುವಂತೆ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry