ಭಾನುವಾರ, ಏಪ್ರಿಲ್ 11, 2021
31 °C

ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಪುನರಾಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ಚಾರಿತ್ರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮ ಎರಡನೆ ಬಾರಿಗೆ  ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

 

ಒಬಾಮಾಗೆ ಅವರಿಗೆ 290 ಮತಗಳು, ಅವರ ಪ್ರತಿಸ್ಪರ್ಧಿ ರಿಪಬ್ಲಿಕ್ ಪಕ್ಷದ ಮಿಟ್ ರೋಮ್ನಿ ಅವರಿಗೆ  201 ಮತಗಳು ದೊರಕಿವೆ.ಮಂಗಳವಾರ ರಾತ್ರಿ 11.15ರ ವೇಳೆಗೆ ಒಬಾಮಾ ಅವರತ್ತ ನಿರ್ಣಾಯಕ ವಿಜಯದ ಅಲೆಗಳು ತೂರಿ ಬರಲು ಆರಂಭಿಸಿದವು. ಗೆಲ್ಲಲು 270 ಮತಗಳನ್ನು ಪಡೆಯಬೇಕಾಗಿದ್ದ ಒಬಾಮಾ ಅವರಿಗೆ ಈ ವೇಳೆಗೆ 274 ಮತಗಳು ಪ್ರಾಪ್ತವಾದರೆ ಮಧ್ಯರಾತ್ರಿ ವೇಳೆಗೆ ಅವರ ಮತಗಳ ಸಂಖ್ಯೆ 290ಕ್ಕೆ ಏರಿತು. ಒಬಾಮಾ ಅವರು ~ಇನ್ನೂ ನಾಲ್ಕು ವರ್ಷಗಳು~ (ಫೋರ್ ಮೋರ್ ಈಯರ್ಸ್) ಎಂದು ಟ್ವಿಟ್ಟರ್ ಸಂದೇಶ ನೀಡುತ್ತಿದ್ದಂತೆಯೇ ಹರ್ಷ ತುಂದಿಲ ಅಭಿಮಾನಿಗಳು ಚಿಕಾಗೋದಲ್ಲಿ ಸಂತಸದೊಂದಿಗೆ ನರ್ತಿಸಿದರು.~ನಾವೆಲ್ಲಾ ಒಟ್ಟಾಗಿದ್ದೇವೆ.ನಮ್ಮ ಪ್ರಚಾರ ಹಾಗಿತ್ತು. ಧನ್ಯವಾದಗಳು~ ಎಂದು ಬೆನ್ನಲ್ಲೇ ಒಬಾಮಾ ಇನ್ನೊಂದು ಟ್ವಟ್ಟರ್ ಸಂದೇಶವನ್ನೂ ನೀಡಿದರು.ಒಬಾಮಾ ಗೆಲುವಿನ ಸುದ್ದಿ ಬರುತ್ತಿದ್ದಂತೆಯೇ ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳ ನಾಯಕರಿಂದ ಒಬಾಮಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.