ಶುಕ್ರವಾರ, ಫೆಬ್ರವರಿ 26, 2021
27 °C

ಅಮೆರಿಕ: ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ: ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

ಅಂಕೊರೇಜ್‌, ಅಮೆರಿಕ (ಎಪಿ): ಅಮೆರಿಕದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟು ದಾಖಲಾಗಿದೆ. ಅದಾಗ್ಯೂ, ಅದೃಷ್ಟವಶಾತ್ ಯಾವುದೇ ಸಾವಿನ ವರದಿಗಳಾಗಿಲ್ಲ.

ಕಂಪನ ಸಂಬಂಧಿತ ಅವಘಡಗಳಲ್ಲಿ  ಕೆನೈನಲ್ಲಿ ನಾಲ್ಕು ಮನೆಗಳು ಹಾನಿಗೊಂಡಿವೆ. ಹಲವೆಡೆ, ಕಪಾಟುಗಳಲ್ಲಿ ವಸ್ತುಗಳೆಲ್ಲ ನೆಲಕ್ಕುರುಳಿವೆ. ಸುಮಾರು 30 ಮನೆಗಳ ನಿವಾಸಿಗಳನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಕಂಪನದಿಂದಾಗಿ ವಿದ್ಯುತ್ ವ್ಯತಯಗೊಂಡು ಸುಮಾರು 4, 800 ಜನರು ಹಲವು ಗಂಟೆಗಳ ಕಾಲ ಕತ್ತಲಲ್ಲಿ ಕಾಲ ಕಳೆದಿದ್ದಾರೆ.

‌ಅಲಾಸ್ಕಾದ ಸ್ಥಳೀಯ ಕಾಲಮಾನ ಪ್ರಕಾರ, ಭಾನುವಾರ ನಸುಕಿನ 1.30ರ ವೇಳೆಗೆ ಕಂಪನ ಸಂಭವಿಸಿದೆ. ಅಂಕೋರೇಜ್‌ನಿಂದ ನೈರುತ್ಯಕ್ಕೆ 257 ಕಿಲೋ ಮೀಟರ್ ದೂರದಲ್ಲಿ ಕೆನೈ ಪೆನಿನ್ಸುಲಾದಲ್ಲಿ ಕಂಪನದ ಕೇಂದ್ರವಿತ್ತು ಎಂದು ಅಮೆರಿಕದ ಭೂಗರ್ಭ ಸಮೀಕ್ಷಾ ಕೇಂದ್ರ ತಿಳಿಸಿದೆ.

ಇನ್ನು, ಸಾವು–ನೋವಿನ ಘಟನೆಗಳ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ಅಂಕೊರೇಜ್ ಹಾಗೂ ವಲ್ಡೆಜ್‌ ಪೊಲೀಸ್ ಇಲಾಖೆಗಳು ತಿಳಿಸಿವೆ.

ಅಲಾಸ್ಕಾದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಪ್ರಬಲ ಕಂಪನ ಇದಾಗಿದೆ. ‘ಈ ಕಂಪನದ ಕೇಂದ್ರವು ಅಲಾಸ್ಕಾದ ಜನವಸತಿ ಪ್ರದೇಶಗಳಿಗೆ ತುಂಬ ಸಮೀಪಕ್ಕಿತ್ತು’ ಎಂದು ಅಲಾಸ್ಕಾ ರಾಜ್ಯ ಭೂಕಂಪ ಶಾಸ್ತ್ರಜ್ಞ ಮೈಕಲ್‌ ವೆಸ್ಟ್‌ ತಿಳಿಸಿದ್ದಾರೆ.

ಕೆಲ ವಾರಗಳ ಕಾಲ ಮರುಕಂ‍ಪನಗಳು ಮರುಕಳಿಸಲಿವೆ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.